ಕರ್ನಾಟಕ

karnataka

ETV Bharat / bharat

"ಹೊಸ ರಸ್ತೆ ಹೇಮಾಮಾಲಿನಿ ಕೆನ್ನೆಯಂತಿದೆ"..! ಸಚಿವನ ವಿವಾದಿತ ಹೇಳಿಕೆ - ರಸ್ತೆಯನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಸಿದ ಸಚಿವ

ಸಚಿವ ಕವಾಸಿ ಲಖ್ಮರ ಈ ಹೇಳಿಕೆಯ ವೇಳೆ ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರೂ ಉಪಸ್ಥಿತರಿದ್ದರು. ಇದು ಆ ಕ್ಷಣಕ್ಕೆ ಅವರಿಗೆ ಕೊಂಚ ಇರಿಸು ಮುರಿಸಾಗಿದ್ದಂತೂ ಸುಳ್ಳಲ್ಲ.

ಬಿಜೆಪಿಯ ಕವಾಸಿ ಲಖ್ಮ

By

Published : Nov 13, 2019, 8:20 PM IST

ಧಮ್ತರಿ(ಛತ್ತೀಸ್​ಗಢ):ನಕ್ಸಲ್​ ಪೀಡಿತ ಪ್ರದೇಶದಿಂದ ಗೆಲುವು ಸಾಧಿಸಿ ಸಚಿವ ಸ್ಥಾನದಲ್ಲಿರುವ ಕವಾಸಿ ಲಖ್ಮ ಹೇಳಿಕೆ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.

ನ.11ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಕವಾಸಿ ಲಖ್ಮ, "ನಕ್ಸಲ್ ಬಾಧಿತ ಪ್ರದೇಶದಿಂದ ಗೆದ್ದು ಸಚಿವಗಿರಿ ಪಡೆದಿರುವ ನಾನು ಹೊಸ ರಸ್ತೆ ಮಾಡಿಸಿದ್ದೇನೆ. ಎಲ್ಲ ರಸ್ತೆಗಳು ಬಾಲಿವುಡ್ ನಟಿ ಹೇಮಾಮಾಲಿನಿ ಕೆನ್ನೆಯಂತಿವೆ" ಎಂದಿದ್ದಾರೆ.

ಸಚಿವ ಕವಾಸಿ ಲಖ್ಮರ ಈ ಹೇಳಿಕೆಯ ವೇಳೆ ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರೂ ಉಪಸ್ಥಿತರಿದ್ದರು. ಇದು ಆ ಕ್ಷಣಕ್ಕೆ ಅವರಿಗೆ ಕೊಂಚ ಇರಿಸು ಮುರಿಸಾಗಿದ್ದಂತೂ ಸತ್ಯ.

ತಮ್ಮ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿದ ಲಖ್ಮ, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮುಜಾಯಿಸಿ ನೀಡಿದ್ದಾರೆ.

ABOUT THE AUTHOR

...view details