ಬಿಲಾಸ್ಪುರ (ಛತ್ತೀಸ್ಗಢ): ಮಹಿಳೆಯರ ಆಶ್ರಯ ಮನೆಯ ಮ್ಯಾನೇಜರ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ 19 ವರ್ಷದ ಯುವತಿ ಮತ್ತು ಇತರ ಇಬ್ಬರು ಯುವತಿಯರು ಆಶ್ರಯ ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.
"ಮೂವರು ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿ ಸಿಆರ್ಪಿಸಿ ಸೆಕ್ಷನ್ 164ರ ಅಡಿ ಕೇಸ್ ದಾಖಲಿಸಿದ್ದೇವೆ. ಮೂವರು ಯುವತಿಯರಲ್ಲಿ ಒಬ್ಬರು ಆಶ್ರಯ ವ್ಯವಸ್ಥಾಪಕ ಜಿತೇಂದ್ರ ಮೌರ್ಯನಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಆತನಿಂದ ದೈಹಿಕ ಹಲ್ಲೆಗೂ ಒಳಗಾಗಿದ್ದಾಗಿ ಆರೋಪಿಸಿದ್ದಾರೆ. ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಮೌರ್ಯನನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ " ಎಂದು ಬಿಲಾಸ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗ್ರವಾಲ್ ಹೇಳಿದ್ದಾರೆ.
ಎನ್‌ಜಿಒ ಶ್ರೀಶಿವಮಂಗಲ್ ಶಿಕ್ಷಣ ಸಮಿತಿ 2014ರಿಂದ ಉಜ್ವಲ ಹೋಮ್ ಬಿಲಾಸ್ಪುರ್ನ್ನು ನಿರ್ವಹಿಸುತ್ತಿದೆ. ಆದರೆ, ಜನವರಿ 17ರಿಂದ ಒಂದಿಲ್ಲೊಂದು ವಿವಾದಗಳು ಕೇಳಿ ಬರುತ್ತಿದೆ.