ಕರ್ನಾಟಕ

karnataka

ETV Bharat / bharat

ಮೋದಿ ಜೊತೆ ಚಂದ್ರಯಾನ -2 ಲ್ಯಾಂಡಿಂಗ್ ಕಣ್ತುಂಬಿಕೊಳ್ಳುವ ಅವಕಾಶ ಪಡೆದ ಬಾಲಕಿ - ಪ್ರಧಾನಿ ಮೋದಿ

9ನೇ ತರಗತಿ ವಿದ್ಯಾರ್ಥಿನಿ ಪ್ರಧಾನಿ ಮೋದಿ ಜೊತೆ ಚಂದ್ರನ ಅಂಗಳಕ್ಕೆ ಚಂದ್ರಯಾನ-2 ಲ್ಯಾಂಡ್​ ಆಗುವುದನ್ನ ನೋಡುವ ಅವಕಾಶ ಪಡೆದುಕೊಂಡಿದ್ದಾಳೆ.

ಶ್ರೀಜಲ್ ಚಂದ್ರಕರ್

By

Published : Aug 31, 2019, 10:15 AM IST

Updated : Aug 31, 2019, 11:29 AM IST

ಮಹಾಸಮುಂದ್​(ಛತ್ತಿಸ್​ಗಡ):ಜಾರ್ಖಂಡ್​ನ ಮಹಾಸಮುಂಡ್​ ಜಿಲ್ಲೆಯ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಜೊತೆ ಚಂದ್ರನ ಅಂಗಳಕ್ಕೆ ಚಂದ್ರಯಾನ - 2 ಇಳಿಯುವುದನ್ನ ನೋಡುವ ಅವಕಾಶ ಪಡೆದುಕೊಂಡಿದ್ದಾಳೆ.

ಮಹಾಸಮುಂದ್​ ಜಿಲ್ಲೆಯ ಸೆಂಟ್ರಲ್​ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಶ್ರೀಜಲ್ ಚಂದ್ರಕರ್ ಎಂಬ ಬಾಲಕಿ ಇಂತಾ ಅವಕಾಶ ಪಡೆದುಕೊಂಡಿದ್ದಾಳೆ. ಆನ್​ಲೈನ್​ ಮೂಲಕ ನಡೆದ ಕ್ವಿಜ್​ನಲ್ಲಿ ಜಯ ಗಳಿಸಿರುವ ಶ್ರೀಜಲ್ ಚಂದ್ರಕರ್ ಸೆಪ್ಟೆಂಬರ್ 7 ರಂದು ಚಂದ್ರಯಾನ-2 ಚಂದ್ರನ ದಕ್ಷಿಣ ಧೃವದಲ್ಲಿ ಇಳಿಯಲಿರುವ ಕ್ಷಣವನ್ನ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಜೊತೆ ಕಣ್ತುಂಬಿಕೊಳ್ಳಲಿದ್ದಾಳೆ.

ಶ್ರೀಜಲ್ ಚಂದ್ರಕರ್, 9ನೇ ತರಗತಿ ವಿದ್ಯಾರ್ಥಿನಿ

ಈ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತನಾಡಿರುವ ಶ್ರೀಜಲ್, ನಾನು ಇಂತಾ ಅವಕಾಶ ಪಡೆದುಕೊಳ್ಳುತ್ತೇನೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ತಂದೆ ಮತ್ತು ಶಿಕ್ಷಕರ ಸಹಾಯದಿಂದ ನಾನು ಜಯಗಳಿಸಲು ಸಾಧ್ಯವಾಯಿತು ಎಂದಿದ್ದಾರೆ.

ಇನ್ನು ಪ್ರಧಾನಿ ಮೋದಿ ಜೊತೆ ಮಾತನಾಡಲು ಅವಕಾಶ ಸಿಕ್ಕರೆ ದೇಶದ ಅಭಿವೃದ್ಧಿಗೆ ನಿಮ್ಮ ಮುಂದಿನ ಯೋಜನೆಗಳು ಏನು ಎಂಬ ವಿಚಾರವನ್ನ ಕೇಳುತ್ತೇನೆ ಎಂದಿದ್ದಾಳೆ.

Last Updated : Aug 31, 2019, 11:29 AM IST

ABOUT THE AUTHOR

...view details