ನವದೆಹಲಿ :ಆರ್ಥಿಕತೆಯ ಪುನ್ಚೇತನಕ್ಕಾಗಿ ರಾಜ್ಯಕ್ಕೆ ₹30,000 ಕೋಟಿ ಆರ್ಥಿಕ ನೆರವು ನೀಡುವಂತೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಗೆಲ್, ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು.
ರಾಜ್ಯಕ್ಕೆ ₹30 ಸಾವಿರ ಕೋಟಿ ನೆರವು ಕೇಳಿ ಪಿಎಂಗೆ ಛತ್ತೀಸ್‌ಗಢ ಸಿಎಂ ಬಾಗೆಲ್ ಪತ್ರ.. - ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್
ಒಂದು ವೇಳೆ ಆರ್ಥಿಕ ಪ್ಯಾಕೇಜ್‌ನ ಅನುಮೋದಿಸದಿದ್ದರೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜ್ಯದ ಸಾಮಾನ್ಯ ಆಡಳಿತ ಯಂತ್ರಕ್ಕೂ ಚಾಲನೆ ಶಕ್ತಿ ಸಿಗಲು ಸಾಧ್ಯವಾಗುವುದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜ್ಯದ ಆರ್ಥಿಕತೆಯನ್ನು ಮತ್ತೆ ಸರಿ ದಾರಿಗೆ ತರಲು ತಕ್ಷಣವೇ 10,000 ಕೋಟಿ ರೂ.ಗಳ ಆರ್ಥಿಕ ನೆರವು ನೀಡಬೇಕು. ಮುಂದಿನ ಮೂರು ತಿಂಗಳಲ್ಲಿ ಉಳಿದ ಪ್ಯಾಕೇಜ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಒಂದು ವೇಳೆ ಆರ್ಥಿಕ ಪ್ಯಾಕೇಜ್‌ನ ಅನುಮೋದಿಸದಿದ್ದರೆ, ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜ್ಯದ ಸಾಮಾನ್ಯ ಆಡಳಿತ ಯಂತ್ರಕ್ಕೂ ಚಾಲನೆ ಶಕ್ತಿ ಸಿಗಲು ಸಾಧ್ಯವಾಗುವುದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಕೋವಿಡ್-19ರ ಕಾರಣದಿಂದಾಗಿ ಬಹು ದೊಡ್ಡ ಬಿಕ್ಕಟ್ಟು ಉಂಟಾಗಿದೆ. ದೀರ್ಘಾವಧಿ ಲಾಕ್‌ಡೌನ್ ರಾಜ್ಯದಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದು ಲಕ್ಷಾಂತರ ಕುಟುಂಬಗಳ ಜೀವನೋಪಾಯ ಕಸಿದಿದೆ. ಕೈಗಾರಿಕೆಗಳಿಗೆ, ವ್ಯವಹಾರಗಳಿಗೆ, ಕಾರ್ಮಿಕರು ಮತ್ತು ರೈತರಿಗೆ ನೀಡಬೇಕಾದ ಹಣಕಾಸಿನ ನೆರವುಗಳಿಗೆ ಮತ್ತು ಇತರ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧಾರ ತೆಗೆದುಕೊಳ್ಳಬೇಕಾದರೂ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲದೆ ಹೋಗಿದೆ. ತಕ್ಷಣ ನೀಡುವ ಪ್ಯಾಕೇಜ್ ಸಹಾಯ ಮಾಡುತ್ತದೆ" ಎಂದು ಬಾಗೆಲ್ ಹೇಳಿದರು.