ಛತ್ತೀಸ್ಗಢ: ರಾಜ್ಯದಲ್ಲಿ ನಕ್ಸಲರ ದಾಳಿ ಹೆಚ್ಚುತ್ತಿದ್ದು, ಇಲ್ಲಿನ ಬಿಜಾಪುರ್ ಜಿಲ್ಲೆಯಲ್ಲಿ ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ.
ಛತ್ತೀಸ್ಗಢ: ನಕ್ಸಲರ ಅಟ್ಟಹಾಸಕ್ಕೆ ಸಿಆರ್ಪಿಎಫ್ ಯೋಧ ಹುತಾತ್ಮ - ಸಿಆರ್ಪಿಎಫ್ ಯೋಧ ಹುತಾತ್ಮ
ಛತ್ತೀಸ್ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮ ಆಗಿದ್ದಾರೆ. ಕಳೆದೊಂದು ತಿಂಗಳಲ್ಲಿ ಈ ಪ್ರದೇಶದಲ್ಲಿ ಒಟ್ಟು ಎಂಟು ಯೋಧರು ನಕ್ಸಲರ ದಾಳಿಯಲ್ಲಿ ಹುತಾತ್ಮರಾದಂತಾಗಿದೆ.
ಸಿಆರ್ಪಿಎಫ್ ಯೋಧ ಹುತಾತ್ಮ
ಬಿಜಾಪುರ್ನ ಟೊಯಿನಾರ್ ಗ್ರಾಮದಲ್ಲಿ ನಿಯೋಜನೆಗೊಂಡಿದ್ದ ಯೋಧ ಮಲ್ಲುರಾಮ್ ಸೂರ್ಯವಂಶಿಯನ್ನು ಐದು ದಿನಗಳ ಹಿಂದೆ ನಕ್ಸಲರು ಅಪಹರಿಸಿದ್ದರು. ಇಂದು ಗಂಗಲೂರ್-ಬಿಜಾಪುರ ರಸ್ತೆಯ ಪಡೇರಾ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅಲ್ಲದೇ ಸ್ಥಳದಲ್ಲಿ ಎಚ್ಚರಿಕೆಯ ಪತ್ರ (warning note) ಕೂಡ ಸಿಕ್ಕಿದೆ.
ಕಳೆದೊಂದು ತಿಂಗಳಲ್ಲಿ ಬಿಜಾಪುರ್ ಜಿಲ್ಲೆಯಲ್ಲಿ ಒಟ್ಟು ಎಂಟು ಮಂದಿ ಯೋಧರು ನಕ್ಸಲರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.