ಚೆನ್ನೈ:ದೋಹಾಗೆ ಹೊರಡಲು ಸಿದ್ಧವಾಗಿದ್ದ ಸರಕು ಸಾಗಿಸುವ ವಿಮಾನದಲ್ಲಿದ್ದ 5.1 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು ಡ್ರಗ್ಸ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಉದ್ಯಮಿ ಮತ್ತು ಖಾಸಗಿ ಏಜೆಂಟ್ನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಹಳೆಯ ವಿಮಾನ ನಿಲ್ದಾಣದಲ್ಲಿ ಹಾರಲು ಸಿದ್ಧವಾಗಿದ್ದ ಸರಕು ಸಾಗಿಸುವ ವಿಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದರಲ್ಲಿ ರಫ್ತು ಕಂಪನಿಯೊಂದರಿಂದ ಬಂದ 7 ಪಾರ್ಸಲ್‌ಗಳು ಚೆನ್ನೈಗೆ ಸೇರಿದ್ದವು. ಅಧಿಕಾರಿಗಳು ಆ ಪಾರ್ಸಲ್ಗಳನ್ನು ನೋಡಿ ಅನುಮಾನಗೊಂಡು ಪರೀಕ್ಷಿಸಿದಾಗ ಅದರಲ್ಲಿ ಗಾಂಜಾ ಮತ್ತು ಡ್ರಗ್ಸ್ ಇರುವುದು ತಿಳಿದು ಬಂದಿದೆ.