ಕರ್ನಾಟಕ

karnataka

ETV Bharat / bharat

ಮೃತದೇಹ ಹೊರತೆಗೆದು ನಮ್ಮ ಪದ್ಧತಿಯಂತೆ ಅಂತ್ಯ ಸಂಸ್ಕಾರ ಮಾಡಿ.. ಸಿಎಂಗೆ ವೈದ್ಯನ ಪತ್ನಿ ಮನವಿ - ಚೆನ್ನೈ ವೈದ್ಯನ ಅಂತ್ಯಸಂಸ್ಕಾರ

ಕೊರೊನಾ ಸೋಂಕಿನಿಂದ ಮೃತಪಟ್ಟು ಅಂತ್ಯಸಂಸ್ಕಾರ ನೆರವೇರಿಸಿರುವ ವೈದ್ಯನ ದೇಹವನ್ನು ಹೊರ ತೆಗೆದು ಮತ್ತೊಮ್ಮೆ ನಮ್ಮ ಪದ್ದತಿಯಂತೆ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಬೇಕು ಎಂದು ವೈದ್ಯನ ಪತ್ನಿ ಕಣೀರು ಹಾಕಿದ್ದಾಳೆ.

wife appeals to CM for fresh burial
ಮುಖ್ಯಮಂತ್ರಿಗೆ ಸಿಎಂ ಪತ್ನಿ ಮನವಿ

By

Published : Apr 22, 2020, 2:22 PM IST

ಚೆನ್ನೈ (ತಮಿಳುನಾಡು):ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವೈದ್ಯ ಡಾ.ಸೈಮನ್ ಹರ್​ಕ್ಯುಲಸ್ ಅವರ ಅಂತ್ಯ ಕ್ರಿಯೆಯನ್ನು ನಮ್ಮ ಪದ್ಧತಿಯ ಪ್ರಕಾರ ಮತ್ತೊಮ್ಮೆ ನಡೆಸಿಕೊಡಬೇಕೆಂದು ವೈದ್ಯನ ಪತ್ನಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶ ಕಳುಹಿಸಿರುವ ವೈದ್ಯನ ಪತ್ನಿ ಆನಂದಿ ಸೈಮನ್, ನನ್ನ ಪತಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ. ಒಂದು ವೇಳೇ ನಾನು ಗುಣಮುಖನಾಗದಿದ್ದರೆ ನಮ್ಮ ಪದ್ದತಿಯಂತೆಯೇ ಅಂತ್ಯಸಂಸ್ಕಾರ ನಡೆಸಬೇಕು ಎಂದು ಅವರು ಹೇಳಿದ್ದರು. ಇದು ಅವರ ಕಡೆಯ ಆಸೆ ಕೂಡ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕೊರೊನಾ ಸೋಂಕು ಎದುರಿಸುವಲ್ಲಿ ಮುಖ್ಯಮಂತ್ರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಡಿಮೆ ಸಾವುಗಳು ಸಂಭವಿಸಿವೆ ಎಂದಿದ್ದಾರೆ.

ಕಿಲ್ಪಾಕ್ ಸ್ಮಶಾನದಲ್ಲಿ ನಮ್ಮ ಪದ್ದತಿಯಂತೆ ಅಂತ್ಯಸಂಸ್ಕಾರ ನಡೆಸಲು ಅವಕಾಶ ನಿಡಬೇಕು. ಮುಚ್ಚಿದ ಕವರ್​ನಲ್ಲಿ ನನ್ನ ಪತಿಯನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ. ಆ ಕವರ್ ಹಾಗೆ ಇರಲಿ ಇದರಿಂದ ವೈರಸ್ ಹರಡುವುದನ್ನು ತಡೆಯಬಹುದು. ನಾನು ವಿಧವೆಯಾಗಿದ್ದೇನೆ, ನನ್ನ ಗಂಡನ ಕೊನೆಯ ಆಸೆ ಈಡೇರಿಸುವಂತೆ ಮುಖ್ಯಮಂತ್ರಿ ಅವರನ್ನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಿದ ವೈದ್ಯ ಭಾನುವಾರ ರಾತ್ರಿ ನಿಧನರಾಗಿದ್ದರು. ಸ್ಥಳೀಯರು ಅವರ ಶವವನ್ನು ಕಿಲ್ಪಾಕ್ ಸ್ಮಶಾನದಲ್ಲಿ ಹೂಳಲು ನಿರಾಕರಿಸಿದ್ದರು. ನಂತರ ಮತ್ತೊಂದು ಸ್ಮಶಾನದಲ್ಲಿ ವೈದ್ಯರ ದೇಹವನ್ನು ಮೊಹರು ಮಾಡಿದ ಕವರ್​ನಲ್ಲಿ ಇರಿಸಿ ಹೂಳಲಾಗಿತ್ತು.

-

ABOUT THE AUTHOR

...view details