ಚೆನ್ನೈ (ತಮಿಳುನಾಡು):ಕೋವಿಡ್ ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿ ನಡುವಿನ ಅಂತರವನ್ನು ನಿವಾರಿಸಬಲ್ಲ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಚೆನ್ನೈ ಮೂಲದ ಕಂಪನಿಯೊಂದು ಪ್ರಕಟಿಸಿದೆ.
ಕಂಪನಿಯ ಸಿಇಒ ವಿಘ್ನೇಶ್ವರ ಮಾತನಾಡಿ, ಎಟಿಕೋಸ್ ಕೋವಿಡ್ ರೋಗಿಗಳ ಆರೈಕೆ ವ್ಯವಸ್ಥೆಯಲ್ಲಿ ಸ್ಮಾರ್ಟ್ ಬಟನ್ ಬಳಸಿ ರೋಗಿಯು ಆರೋಗ್ಯ ಕಾರ್ಯಕರ್ತರೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದು ಎಂದು ಹೇಳಿದರು.
ಯಾವುದೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದರೆ ಅಲ್ಲಿ ರೋಗಿಗಳನ್ನು ನೋಡಿಕೊಳ್ಳಲು ಅಟೆಂಡೆಂಟ್‌ಗಳು ಇರುತ್ತಾರೆ. ಕೊರೊನಾ ವೈರಸ್ ಪ್ರಕರಣದಲ್ಲಿ, ಯಾವುದೇ ಅಟೆಂಡೆಂಟ್ ಇರುವುದಿಲ್ಲ. ರೋಗಿಗಳನ್ನು ನೋಡಿಕೊಳ್ಳಲು ಬಯಸುವ ದಾದಿಯರು ಅವರ ಬಳಿಗೆ ಆಗಾಗ್ಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ, ಅವರೂ ಕೂಡಾ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ. ಈ ಅಂತರವನ್ನು ನಿವಾರಿಸಲು ಈ ಸಾಧನ ಸಹಾಯ ಮಾಡಲಿದೆ ಅವರು ವಿವರಿಸಿದರು.