ಕರ್ನಾಟಕ

karnataka

By

Published : Feb 2, 2021, 10:55 PM IST

ETV Bharat / bharat

2.17 ಕೋಟಿ ರೂ ಮೌಲ್ಯದ ಚಿನ್ನ ವಶಕ್ಕೆ ಪಡೆದ ಚೆನ್ನೈ ಏರ್ ಕಸ್ಟಮ್ಸ್

ಸುಮಾರು 4.1717 ಕೋಟಿ ಮೌಲ್ಯದ ಒಟ್ಟು 4.15 ಕಿಲೋಗ್ರಾಂ ಚಿನ್ನವನ್ನು ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಚೆನ್ನೈ ಏರ್ ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

chennai-air-customs-recovers-gold-worth-rs-2-dot-17-crore
2.17 ಕೋಟಿ ರೂ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದ ಚೆನ್ನೈ ಏರ್ ಕಸ್ಟಮ್ಸ್ ಕಳ್ಳಸಾಗಣೆ ದಂಧೆ ನಡೆಸಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಿದ ಏರ್ ಕಸ್ಟಮ್ಸ್ ನಿರ್ಗಮನದ ವೇಳೆ ಪ್ರಯಾಣಿಕರನ್ನು ತಡೆಹಿಡಿದು ಬಂಧಿಸಿದ ವಾಯು ಗುಪ್ತಚರ ಘಟಕದ ಅಧಿಕಾರಿಗಳು

ಚೆನ್ನೈ: ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಸುಮಾರು 2.17 ಕೋಟಿ ರೂ ಮೌಲ್ಯದ 4.15 ಕೆಜಿ ಚಿನ್ನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದು, ಕಳ್ಳಸಾಗಣೆ ದಂಧೆ ನಡೆಸಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಿದ್ದಾರೆ.

ಜನವರಿ 22 ರಂದು ದುಬೈ ಮತ್ತು ಶಾರ್ಜಾದಿಂದ ಬಂದ ಪ್ರಯಾಣಿಕರನ್ನು ವಾಯು ಗುಪ್ತಚರ ಘಟಕದ ಅಧಿಕಾರಿಗಳು ಅನುಮಾನದ ಮೇಲೆ ತಡೆಹಿಡಿದಿದ್ದಾರೆ ಎಂದು ಚೆನ್ನೈ ಕಸ್ಟಮ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರಲ್ಲಿ ಪ್ರಯಾಣಿಕರು ಪಾಲಿಥೀನ್ / ರಬ್ಬರ್ ಹೊದಿಕೆಯೊಂದಿಗೆ ಸುತ್ತಿದ ಚಿನ್ನದ ಪೇಸ್ಟ್ ಕ್ಯಾಪ್ಸುಲ್ಗಳನ್ನು ನುಂಗಿರುವುದು ತಿಳಿದುಬಂದಿದೆ.

2.17 ಕೋಟಿ ರೂ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದ ಚೆನ್ನೈ ಏರ್ ಕಸ್ಟಮ್ಸ್

ಚಿನ್ನದ ಕ್ಯಾಪ್ಸುಲ್​​ಗಳನ್ನು ಮರೆಮಾಡುವ ಉದ್ದೇಶದಿಂದ ಅವರು ಹೊರಡುವ ಮೊದಲು ಚಿನ್ನದ ಪೇಸ್ಟ್ ಕ್ಯಾಪ್ಸುಲ್ಗಳನ್ನು ನುಂಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಓದಿ:ವೈದ್ಯಲೋಕದಲ್ಲಿ ಹೊಸ ದಾಖಲೆ: ಹೈದರಾಬಾದ್​ನಲ್ಲಿ ಮೆಟ್ರೋ ರೈಲಿನ ಮೂಲಕ ಹೃದಯ ರವಾನೆ!

ಆರೋಪಿಗಳಿಂದ ಚಿನ್ನದ ಕ್ಯಾಪ್ಸುಲ್​​ಗಳನ್ನು ಹಿಂಪಡೆಯಲು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕ್ರಿಯೆ ಪೂರ್ಣಗೊಳ್ಳಲು ಎಂಟು ದಿನಗಳು ಬೇಕಾಯಿತು ಎಂದು ಕಸ್ಟಮ್ಸ್ ಹೇಳಿದೆ.

ಎಂಟು ಪ್ರಯಾಣಿಕರಿಂದ ಕಸ್ಟಮ್ಸ್ ಕಾಯ್ದೆಯಡಿ 4.1717 ಕೋಟಿ ಮೌಲ್ಯದ ಒಟ್ಟು 4.15 ಕಿಲೋಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎಲ್ಲ 8 ಪ್ರಯಾಣಿಕರ ಹೊಟ್ಟೆಯಿಂದ 2.88 ಕೆಜಿ ತೂಕದ ಮತ್ತು 28 1.28 ಕೋಟಿ ಮೌಲ್ಯದ ಒಟ್ಟು 161 ಕ್ಯಾಪ್ಸುಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.

ABOUT THE AUTHOR

...view details