ರಾಜ್ಕೋಟ್:ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದೆಂಬ ಸದುದ್ದೇಶ ಇಟ್ಟುಕೊಂಡು ಗುಜರಾತ್ನಲ್ಲಿ ಚಾರಿಟಬಲ್ ಟ್ರಸ್ಟ್ವೊಂದು 'ರೋಟಿ ಬ್ಯಾಂಕ್' ನಡೆಸುತ್ತಿದೆ.
ರಾಜ್ಕೋಟ್ನ ಶ್ರೀ ಬೋಲ್ಬಾಲಾ ಚಾರಿಟಬಲ್ ಟ್ರಸ್ಟ್ ಈ ಮಹತ್ತರ ಕಾರ್ಯ ಮಾಡುತ್ತಿದೆ. ಆಟೋ ರಿಕ್ಷಾ ಚಾಲಕರ ಸಹಾಯದಿಂದ ಮನೆಗಳಲ್ಲಿ ತಯಾರು ಮಾಡಿದ ರೊಟ್ಟಿಗಳನ್ನು ಸಂಗ್ರಹಿಸಿ, ನಗರದಲ್ಲಿ ಒಂದೊತ್ತು ಊಟಕ್ಕೂ ಪರದಾಡುತ್ತಿರುವ ಬಡವರಿಗೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡ ರೋಗಿಗಳಿಗೆ ಹಂಚುತ್ತಿದೆ.
ನಮ್ಮ ಟ್ರಸ್ಟ್ನ ಸದಸ್ಯರು ಪ್ರತಿ ಮನೆಯಿಂದ ಎರಡು ರೊಟ್ಟಿಯಂತೆ ಸಾವಿರಕ್ಕೂ ಹೆಚ್ಚು ಮನೆಗಳಿಂದ ರೊಟ್ಟಿ ಸಂಗ್ರಹಿಸಿ, ನಂತರ ನಗರದಾದ್ಯಂತ ಇರುವ ನಿರ್ಗತಿಕರಿಗೆ ಹಂಚುತ್ತಿದೆ ಎಂದು ಶ್ರೀ ಬೋಲ್ಬಾಲಾ ಚಾರಿಟಬಲ್ ಟ್ರಸ್ಟ್ನ ಧರ್ಮದರ್ಶಿ ಜಯೇಶ್ ಉಪಾಧ್ಯಾಯ್ ಹೇಳಿದರು.
ಟ್ರಸ್ಟ್ನ ಮತ್ತೊಬ್ಬ ಸದಸ್ಯರು ಮಾತನಾಡಿ, ಯಾರೊಬ್ಬರೂ ಕೂಡ ಖಾಲಿ ಹೊಟ್ಟೆಯಲ್ಲಿ ಮಲಗಬಾರದೆಂದು ನಾವು ಬಯಸುತ್ತೇವೆ. ಬಿಹಾರ್ ಹಾಗೂ ಪಂಜಾಬ್ಗಳಲ್ಲಿ ಇದೇ ರೀತಿಯ ಬ್ಯಾಂಕ್ಗಳ ಕಾರ್ಯವನ್ನು ನೋಡಿದ ಮೇಲೆ ನಮಗೆ 'ರೋಟಿ ಬ್ಯಾಂಕ್' ತೆರೆಯುವ ಕಲ್ಪನೆ ಬಂತು ಎಂದರು.
ಕರ್ನಾಟಕ, ತಮಿಳುನಾಡುಗಳಲ್ಲಿ ಇಂದಿರಾ ಹಾಗೂ ಅಮ್ಮ ಕ್ಯಾಂಟೀನ್ಗಳು ಬಡವರ ಹೊಟ್ಟೆ ತುಂಬಿಸುತ್ತಿವೆ. ಇದನ್ನ ಸರ್ಕಾರವೇ ಮಾಡುತ್ತಿದೆ. ಆದರೆ ಗುಜರಾತ್ನ ರಾಜ್ಕೋಟ್ನಲ್ಲಿ ಸ್ವಯಂ ಸೇವಾ ಸಂಸ್ಥೆಯೇ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯವೇ ಸರಿ