ಕರ್ನಾಟಕ

karnataka

ETV Bharat / bharat

ಮೊದಲ ಹಂತ ಪ್ರವೇಶಿಸಿದ ಚಂದ್ರಯಾನ.. ಈಗ ನೌಕೆ ಎಲ್ಲಿದೆ? - ಚಂದ್ರಯಾನ-2

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ರ ಉಡಾವಣೆ ಈಗಾಗಲೇ ಯಶಸ್ವಿಯಾಗಿದ್ದು, ಮೊದಲ ಭೂ ಪರಿಮಿತಿ ಕಕ್ಷೆಯನ್ನು ಚಂದ್ರಯಾನ-2 ಯಶಸ್ವಿಯಾಗಿ ತಲುಪಿದೆ ಎಂದು ದೀ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ (ಇಸ್ರೋ) ತಿಳಿಸಿದೆ.

ಚಂದ್ರಯಾನ-2

By

Published : Jul 24, 2019, 7:39 PM IST

Updated : Jul 24, 2019, 7:44 PM IST

ಶ್ರೀಹರಿಕೋಟ (ಆಂಧ್ರ ಪ್ರದೇಶ):ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಉಡಾವಣೆ ಈಗಾಗಲೇ ಯಶಸ್ವಿಯಾಗಿದ್ದು, ಮೊದಲ ಭೂ ಪರಿಮಿತಿ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-2 ಕ್ಕೆ ಆನ್​ಬೋರ್ಡ್ ಪ್ರೊಪಲ್​ಷನ್ ಸಿಸ್ಟಂ ಬಳಸಿ, 57 ಸೆಕೆಂಡುಗಳ ಫೈರಿಂಗ್​ ಅವಧಿಯನ್ನು ಯೋಜಿಸಿದಂತೆ ಮುಗಿಸಿ, 2 ಗಂಟೆ 52 ಸೆಕೆಂಡ್​ಗಳ ಕಾಲ ಮೊದಲ ಭೂ ಪರಿಮಿತಿ ಕಕ್ಷೆ ವೀಕ್ಷಣೆ ನಡೆಸಲಾಯಿತು ಎಂದು ತಿಳಿಸಿದೆ.

ಇನ್ನು ಎರಡನೇ ಕಕ್ಷೆಯನ್ನು ಜುಲೈ 26 ರಂದು ಬೆಳಗ್ಗೆ 9 ಗಂಟೆ ತಲುಪಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದ್ದು, ಈ ವರ್ಷದ ಸೆಪ್ಟೆಂಬರ್ 6 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್​ ಇಳಿಯುವ ನಿರೀಕ್ಷೆಯಿದೆ ಎನ್ನಲಾಗಿದೆ.

Last Updated : Jul 24, 2019, 7:44 PM IST

ABOUT THE AUTHOR

...view details