ಹೈದರಾಬಾದ್: ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ -2 ಉಡಾವಣೆ ರದ್ದುಗೊಂಡಿದೆ.
ಲಾಂಚ್ ವೆಹಿಕಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಉಡಾವನೆಯನ್ನ ರದ್ದುಗೊಳಿಸಲಾಗಿದೆ. ಶೀಘ್ರದಲ್ಲೆ ಉಡಾವಣೆಯ ದಿನವನ್ನ ಘೋಷಣೆಮಾಡಲಾಗುವುದು ಎಂದು ಟ್ವೀಟ್ ಮಾಡಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಇಂದು ನಸುಕಿನ ಜಾವ 2 ಗಂಟೆ 51 ನಿಮಿಷಕ್ಕೆ ಸರಿಯಾಗಿ ಆಂಧ್ರದ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಬೇಕಿತ್ತು.