ಕರ್ನಾಟಕ

karnataka

ETV Bharat / bharat

4ಸಾವಿರ ಕಿ.ಮೀ ದೂರದಿಂದ ಚಂದ್ರನ ಬೃಹತ್​ ರಂಧ್ರಗಳ ಫೋಟೊ ತೆಗೆದ ಚಂದ್ರಯಾನ2 - ಟೆರ್ರೈನ್​ ಕ್ಯಾಮೆರಾ

ಚಂದ್ರಯಾನ2 ನೌಕೆಗೆ ಅಳವಡಿಸಲಾಗಿರುವ ಟೆರ್ರೈನ್​ ಕ್ಯಾಮೆರಾ ಚಂದ್ರನ ಮೇಲಿರುವ ಬೃಹತ್​ ರಂಧ್ರಗಳನ್ನು ಸೆರೆ ಹಿಡಿದಿದೆ. ಈಗಾಗಲೇ ಈ ರಂಧ್ರಗಳನ್ನು ಭೂಮಿಯ ಮೇಲಿಂದ ಗುರುತಿಸಿ ಅವಕ್ಕೆ ಹೆಸರಿಡಲಾಗಿದೆ.

chandrayan2

By

Published : Aug 26, 2019, 5:57 PM IST

Updated : Aug 26, 2019, 6:18 PM IST

ನವದೆಹಲಿ:ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿರುವ ಚಂದ್ರಯಾನ2 ನೌಕೆ ಶಶಿಯ ಅಂಗಳ ತಲುಪಲು ಇನ್ನು ಕೆಲವೇ ದಿನಗಳು ಬಾಕಿ ಇವೆ.

ಈ ಮಧ್ಯೆ ನೌಕೆಯು 4,375 ಕಿ,ಮೀ ದೂರದಿಂದಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಿದ್ದು, ಇಸ್ರೋ ಅದನ್ನು ಹಂಚಿಕೊಂಡಿದೆ.

ಚಂದ್ರಯಾನ2 ನೌಕೆಗೆ ಅಳವಡಿಸಲಾಗಿರುವ ಟೆರ್ರೈನ್​ ಕ್ಯಾಮೆರಾ ಚಂದ್ರನ ಮೇಲಿರುವ ಬೃಹತ್​ ರಂಧ್ರಗಳನ್ನು ಸೆರೆ ಹಿಡಿದಿದೆ. ಈಗಾಗಲೇ ಈ ರಂಧ್ರಗಳನ್ನು ಭೂಮಿಯ ಮೇಲಿಂದ ಗುರುತಿಸಿ ಅವಕ್ಕೆ ಹೆಸರಿಡಲಾಗಿದೆ.

ಜಾಕ್ಸನ್​, ಮಾರ್ಚ್​, ಕೊರಲೇವ್ ಹಾಗೂ ಮಿತ್ರಾ ಹೆಸರಿನ ಈ ರಂಧ್ರಗಳನ್ನು ನೌಕೆಯು ಸೆರೆ ಹಿಡಿದಿದೆ. ಮಿತ್ರಾ ಹೆಸರಿನ ರಂಧ್ರವನ್ನು ಪ್ರೊಫೆಸರ್​ ಶಿರಿಶ್​ ಕುಮಾರ್ ಮಿತ್ರಾ ಅವರು ಗುರುತಿಸಿದ್ದರು. ಹಾಗಾಗಿ ಅವರ ಹೆಸರನ್ನುಇಡಲಾಗಿದೆ.

Last Updated : Aug 26, 2019, 6:18 PM IST

ABOUT THE AUTHOR

...view details