ಕರ್ನಾಟಕ

karnataka

ETV Bharat / bharat

ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ... ನಾಳೆ ಚಂದಿರನತ್ತ ನಮ್ಮ ಹೆಮ್ಮೆಯ ರಾಕೆಟ್

ಎರಡನೇ ಬಾರಿಗೆ ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ ಇಸ್ರೋ ನಿಗದಿಯಂತೆ ಇದೇ ತಿಂಗಳ 15ಕ್ಕೆ ರಾಕೆಟ್ ಉಡಾವಣೆ ಮಾಡಬೇಕಿತ್ತು. ಆದರೆ ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.

By

Published : Jul 21, 2019, 8:57 PM IST

ಚಂದ್ರಯಾನ-2

ನವದೆಹಲಿ:ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೆ ಸಜ್ಜಾಗಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-2ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಎರಡನೇ ಬಾರಿಗೆ ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ ಇಸ್ರೋ ನಿಗದಿಯಂತೆ ಇದೇ ತಿಂಗಳ 15ಕ್ಕೆ ರಾಕೆಟ್ ಉಡಾವಣೆ ಮಾಡಬೇಕಿತ್ತು. ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.

ಚಂದ್ರಯಾನ-2ರ ಉಡಾವಣಾ ರಿಹರ್ಸಲ್​​ ಯಶಸ್ವಿ... ನಾಳೆ ನಭಕ್ಕೆ ಹಾರಲಿದೆ ನೌಕೆ!

ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ (ಜುಲೈ 22)ರ ಮಧ್ಯಾಹ್ನ 2.43ಕ್ಕೆ ಚಂದ್ರಯಾನ-2ರ ರಾಕೆಟ್ ನಭಕ್ಕೆ ಜಿಗಿಯಲಿದೆ. ಈ ನಿಟ್ಟಿನಲ್ಲಿ ಇಂದು ಸಂಜೆ 6.43ಕ್ಕೆ ಕ್ಷಣಗಣನೆ ಆರಂಭಿಸಲಾಗಿದೆ.

ಚಂದ್ರಯಾನ-2ರ ಉಡಾವಣೆಗೆ ಈಗಾಗಲೇ ನಡೆಸಲಾದ ರಿಹರ್ಸಲ್ ಯಶಸ್ವಿಯಾಗಿದೆ. ಜುಲೈ 22ರಂದು ಉಡಾವಣೆಯಾಗಲಿರುವ ಚಂದ್ರಯಾನ-2 ರಾಕೆಟ್ ಸೆಪ್ಟೆಂಬರ್​​ 6ರಂದು ಚಂದ್ರನ ಅಂಗಳಕ್ಕೆ ಕಾಲಿಡಲಿದೆ.

ABOUT THE AUTHOR

...view details