ಕರ್ನಾಟಕ

karnataka

ETV Bharat / bharat

ಮುಂದಿನ ವರ್ಷದ ಈ ತಿಂಗಳು ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್​? - ಚಂದ್ರಯಾನ 3 ಲೇಟೆಸ್ಟ್ ಸುದ್ದಿ

ಮುಂದಿನ ವರ್ಷ ನವೆಂಬರ್​ ವೇಳೆಗೆ ಚಂದ್ರನಲ್ಲಿ ಮತ್ತೊಮ್ಮೆ ಸಾಫ್ಟ್​ ಲ್ಯಾಂಡಿಂಗ್​ ಮಾಡಲು ಇಸ್ರೋ ವಿಜ್ಞಾನಿಗಳು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಚಂದ್ರಯಾನ-3

By

Published : Nov 14, 2019, 4:41 PM IST

ನವದೆಹಲಿ/ಬೆಂಗಳೂರು:ಇಸ್ರೋ ಪಾಲಿನ ಅತಿದೊಡ್ಡ ಯೋಜನೆಯಾದ ಚಂದ್ರಯಾನ-2 ಸಂಪೂರ್ಣ ಯಶಸ್ವಿಯಾಗುವಲ್ಲಿ ವಿಫಲವಾಗಿತ್ತು. ಆ ಸೋಲಿನಿಂದ ಪಾಠ ಕಲಿತಿರುವ ಇಸ್ರೋ ವಿಜ್ಞಾನಿಗಳು ಇನ್ನೊಂದೇ ವರ್ಷದಲ್ಲಿ ಮತ್ತೆ ಚಂದ್ರನ ಅಂಗಳದಲ್ಲಿಳಿಯಲು ಸಿದ್ಧತೆ ನಡೆಸಿದ್ದಾರೆ.

ಮುಂದಿನ ವರ್ಷ ನವೆಂಬರ್​ ವೇಳೆಗೆ ಚಂದ್ರನಲ್ಲಿ ಮತ್ತೊಮ್ಮೆ ಸಾಫ್ಟ್​ ಲ್ಯಾಂಡಿಂಗ್​ ಮಾಡಲು ಇಸ್ರೋ ವಿಜ್ಞಾನಿಗಳು ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಚಂದ್ರಯಾನ-3ಗೆ ಸಂಬಂಧಿಸಿದಂತೆ ಇಸ್ರೋ ಉನ್ನತಮಟ್ಟದ ಸಮಿತಿಯನ್ನು ರಚನೆ ಮಾಡಿದೆ. ತಿರುವನಂತಪುರದ ವಿಕ್ರಮ್ ಸಾರಾಭಾಯ್​ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಸ್.ಸೋಮನಾಥ್​ ಎಲ್ಲ ರಾಕೆಟ್ ಉಡ್ಡಯನದ ಮೇಲ್ವಿಚಾರಕರಾಗಿದ್ದು, ಚಂದ್ರಯಾನ-3 ಬಗ್ಗೆ ಮಾಡಲಾದ ಪ್ರಸ್ತಾವನೆಯ ಕುರಿತು ವರದಿ ಸಿದ್ಧಪಡಿಸಲಿದ್ದಾರೆ.

ಸದ್ಯ ವರದಿಗಾಗಿ ಇಸ್ರೋ ವಿಜ್ಞಾನಿಗಳು ಕಾಯುತ್ತಿದ್ದು, ಮುಂದಿನ ನವೆಂಬರ್​​​ ಒಳಗಾಗಿ ಮಿಷನ್ ಪೂರ್ತಿಗೊಳಿಸಲು ಕೆಲ ನಿಯಮಾವಳಿಗಳನ್ನು ರೂಪಿಸಲಾಗಿದೆ.ನವೆಂಬರ್​​ ತಿಂಗಳು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ಗೆ ಅತ್ಯಂತ ಸೂಕ್ತವಾಗಿದ್ದು, ಚಂದ್ರಯಾನ-2ರಲ್ಲಿ ಉಂಟಾದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಇಸ್ರೋ ಹೇಳಿದೆ.

ABOUT THE AUTHOR

...view details