ನವದೆಹಲಿ: ಚಂದ್ರನ ಕಕ್ಷೆಯಲ್ಲಿರುವ ಚಂದ್ರಯಾನ- 2 ಯೋಜನೆಯ ಆರ್ಬಿಟರ್ನಲ್ಲಿರುವ ಎಂಟು ಪೇಲೋಡ್‌ಗಳಲ್ಲಿ ಒಂದಾದ ಚಂದ್ರನ ಅಟ್ಮಾಸ್ಫಿಯರಿಕ್ ಕಾಂಪೊಸಿಷನ್ ಎಕ್ಸ್‌ಪ್ಲೋರರ್-2 (CHACE-2) ಚಂದ್ರನಲ್ಲಿನ ವಾತಾವರಣದ ಸುತ್ತಲಿನ ತೆಳುವಾದ ಅನಿಲ ಆರ್ಗಾನ್ ಸಾಂದ್ರತೆಯ ಡೇಟಾವನ್ನು ಇಸ್ರೋಗೆ ರವಾನಿಸಿದೆ.
*ಸ್ವಾಭಾವಿಕ ಉದಾತ್ತ ಅನಿಲದ ಐಸೊಟೋಪ್‌ಗಳಲ್ಲಿ ಒಂದಾದ ಆರ್ಗಾನ್ -40 ಭೂಗೋಳದ ಅತ್ಯಮೂಲ್ಯವಾದ ಅಂಶವಾಗಿದೆ. ಇದು ಪೊಟ್ಯಾಸಿಯಮ್ -40 ವಿಕಿರಣಶೀಲನೆ ವಿಘಟನೆಯಿಂದ ಹುಟ್ಟಿಕೊಂಡಿದೆ.
ವಿಕಿರಣಶೀಲ ಪೊಟ್ಯಾಸಿಯಮ್- 40 ಚಂದ್ರನ ಮೇಲ್ಮೈ ನಲ್ಲಿ ಆರ್ಗನ್- 40 ವಿಂಗಡಣೆ ಆಗುತ್ತದೆ. ಇದು ಸೀಪೇಜ್ ಮತ್ತು ಫಾಲ್ಟ್ಸ್ ಮೂಲಕ ಹರಡಿ ಚಂದ್ರನ ವಾತಾವರಣದಿಂದ ಹೊರಗೋಳಕ್ಕೆ ಚಲಿಸುತ್ತದೆ.
ಸ್ಪೆಕ್ಟ್ರೋಮೀಟರ್ ಆಗಿರುವ ಚೇಸ್ -2, ಅರ್ಗಾನ್ -40 ರ ಸಾಂದ್ರತೆಯ ಹಗಲು-ರಾತ್ರಿ ನಡುವಿನ ವ್ಯತ್ಯಾಸಗಳನ್ನು ಪತ್ತೆ ಮಾಡಿದೆ. ಅಂಗಾರಕನ ಕಕ್ಷೆಯ ಮೇಲ್ಮೈಯಲ್ಲಿರುವ ತಾಪಮಾನ ಮತ್ತು ಒತ್ತಡಗಳಲ್ಲಿ ಘನೀಕರಿಸಬಹುದಾದ (ಹೆಪ್ಪುಗಟ್ಟುವ )ಅನಿಲವಾದ ಈ ಅಂಶವು ರಾತ್ರಿಯಲ್ಲಿ ಚಂದ್ರನ ವಾತಾವರಣ ಗಟ್ಟಿಯಾಗಿಸುತ್ತದೆ. ಇದು ಮತ್ತೆ ಚಂದ್ರನ ಹೊರಗೋಳಕ್ಕೆ ಚಲಿಸಲು ಆರಂಭಿಸುತ್ತದೆ.
*ಏನಿದು ಉದ್ದಾತ ಅನಿಲ?
ಸ್ವಾಭಾವಿಕವಾಗಿ ಸಂಭವಿಸುವ ಹೀಲಿಯಂ (He), ನಿಯಾನ್ (Ne), ಆರ್ಗಾನ್ (Ar), ಕ್ರಿಪ್ಟಾನ್ (Kr), ಕ್ಸೆನಾನ್ (Xe) ಮತ್ತು ವಿಕಿರಣಶೀಲ ರೇಡಾನ್ಗಳನ್ನು (Rn) ಉದಾತ್ತ ಅನಿಲಗಳು ಎಂದು ಕರೆಯಲಾಗುತ್ತದೆ.
ನಿರ್ದಿಷ್ಟ ಹಾಗೂ ವಿಪರೀತ ಪರಿಸ್ಥಿತಿಗಳಲ್ಲಿ ಹೊರತುಪಡಿಸಿ ಉದಾತ್ತ ಅನಿಲಗಳು ಸಾಮಾನ್ಯ ವಾತಾವರಣಲದಲ್ಲಿ ಪ್ರತಿಕ್ರಿಯಾತ್ಮಕ ಆಗಿರುವುದಿಲ್ಲ. ನಿಯಾನ್, ಆರ್ಗಾನ್, ಕ್ರಿಪ್ಟಾನ್ ಮತ್ತು ಕ್ಸೆನಾನ್ ಅನ್ನು ಅನಿಲಗಳ ದ್ರವೀಕರಣ ಮತ್ತು ಭಾಗಶಃ ಬಟ್ಟಿ ಇಳಿಸುವಿಕೆಯ ವಿಧಾನ ಬಳಸಿಕೊಂಡು ಗಾಳಿಯಿಂದ ಬೇರ್ಪಡಿಸುವ ಪಡೆಯಲಾಗುತ್ತದೆ.