ನವದೆಹಲಿ:ಇಡೀ ವಿಶ್ವದ ಗಮನ ಸೆಳೆದು ಚಂದ್ರನತ್ತ ಸಾಗಿರುವ ಭಾರತದ ಉಪಗ್ರಹ ಲ್ಯಾಂಡ್ ಆಗುವುದನ್ನು ಪ್ರಧಾನಿ ಮೋದಿ ಜತೆ ಕುಳಿತು ವೀಕ್ಷಿಸಲು ಜನರಿಗೆ ಸುವರ್ಣಾವಕಾಶವೊಂದು ಸಿಕ್ಕಿದೆ.
ಹೌದು, ಭಾರತದ ಚಂದ್ರಯಾನ 2 ಯಶಸ್ವಿ ಲ್ಯಾಂಡಿಂಗ್ಅನ್ನು ಪ್ರಧಾನಿ ನರೇಂದ್ರ ಮೋದಿ ಜತೆ ವೀಕ್ಷಿಸುವ ಅವಕಾಶವನ್ನು ಭಾರತ ಸರ್ಕಾರ ನೀಡಿದೆ. ಇದಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಇಂತಹುದೊಂದು ಸುವರ್ಣಾವಕಾಶ ಸಿಗಲಿದೆ.