ಬೆಂಗಳೂರು:47 ದಿನಗಳ ಕಾಲ ಚಂದ್ರಯಾನ -2 ದ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಆಗೋದನ್ನ ಕಾತರದಿಂದ ಕಾಯುತ್ತಿದ್ದ ಆ ದಿನಗಳು ಬಂದೇ ಬಿಟ್ಟಿತ್ತು. ದಿನಾಂಕ 7 ನಡುರಾತ್ರಿ 1.38 ರಿಂದ 2.00 ರ ವೇಳೆಗೆ ಎಲ್ಲವೂ ಸರಿಯಾಗಿಯೇ ನಡೆದಿತ್ತು.
ಲ್ಯಾಂಡರ್ನಲ್ಲಿ ಮಗ್ನರಾಗಿದ್ದ ಇಸ್ರೋ ಎಲ್ಲವೂ ಅಂದುಕೊಂಡಂತೆ ಸಾಗಿತ್ತು ಆರ್ಬಿಟರ್ನಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್, ಇಂದು ಇನ್ನೇನು ಚಂದಮಾಮನ ಅಂಗಳಕ್ಕೆ ಮುತ್ತಿಕ್ಕಲು 2 ಕಿ.ಮೀ ದೂರ ಇದೆ ಎನ್ನುವಾಗಲೇ ಇಸ್ರೋ ಕೇಂದ್ರದಿಂದ ಸಂಪರ್ಕ ಕಳೆದುಕೊಂಡು ಬಿಟ್ಟಿತು. ನಡುರಾತ್ರಿ 1: 44ರಿಂದ 2 ಗಂಟೆ 20 ನಿಮಿಷದ ವರೆಗೆ ಎಲ್ಲರಲ್ಲೂ ಡವ ಡವ..
ಇಸ್ರೋದ ಸಾಧನೆ ಕಣ್ತುಂಬಿಕೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಎದೆಯಲ್ಲೂ ಒಂದು ಕ್ಷಣ ಮೌನದ ಅನುಭವ.. ಅಂತಿಮವಾಗಿ ಇಸ್ರೋ ಅಧ್ಯಕ್ಷ ಕೆ ಸಿವನ್ ಮೋದಿ ಬಳಿ ಹೋಗೆ ಅದೇನೋ ಉಸಿರಿದರು.
ಇಸ್ರೋ ಅಧ್ಯಕ್ಷ ಸಿವನ್ ಘೋಷಣೆ ಕಾತರ ತಡೆಯದೇ ಮೋದಿ ಸಾಹೇಬರು ಅತ್ತಿಂದಿತ್ತ ಓಡಾಡಿದರು.. ನಂತರ ಕೆ ಶಿವನ್ ಆ ಒಂದು ಘೋಷಣೆ ಮಾಡಿಯೇ ಬಿಟ್ಟರು... 2.1 ಕಿಮೀ ಚಂದ್ರನ ಹತ್ತಿರ ಬರುವವರೆಗೂ ಎಲ್ಲವೂ ಅಂದುಕೊಂಡಂತೆಯೇ ಇತ್ತು... ಆದರೆ, 2.1 ಕಿ.ಮೀ ಸಮೀಪಕ್ಕೆ ಬರುತ್ತಿದ್ದಂತೆ ನಮ್ಮಿಂದ ಸಂಪರ್ಕ ಕಳೆದುಕೊಂಡಿದೆ. ಈ ಬಗ್ಗೆ ಆರ್ಬಿಟರ್ನಿಂದ ಡೇಟಾ ಅಧ್ಯಯನ ನಡೆಸುತ್ತಿದ್ದೇವೆ ಎಂದು ಘೋಷಿಸಿಯೇ ಬಿಟ್ಟರು.
ಸಿಗ್ನಲ್ ಸಂಪರ್ಕ ಕಡೆದುಕೊಂಡ ವೇಳೆ ಆ ಬಳಿಕ ಪ್ರಧಾನಿ ಇಸ್ರೋ ವಿಜ್ಞಾನಿಗಳಿಗೆ,ತಂತ್ರಜ್ಞರಿಗೆ ಧೈರ್ಯ ತುಂಬಿ ಹೋಟೆಲ್ ನತ್ತ ತೆರಳಿದರು... ಆ ಬಳಿಕ ಇಸ್ರೋ ಕೇಂದ್ರದಲ್ಲಿ ನೀರವ ಮೌನ. ಏನು ಮಾಡಬೇಕು ಎಂಬುದು ತಿಳಿಯದೇ ಗೊಂದಲ. ಆ ಬಳಿಕ ಇಸ್ರೋ ವತಿಯಿಂದ ದೇವಿ ಪ್ರಸಾದ್ ಕಾರ್ಣಿಕ್ ಸಿವನ್ ಹೇಳಿದ ಮಾತುಗಳನ್ನೇ ಹೇಳಿ, ಸಕ್ಸಸ್ ಇಲ್ಲವೇ ಫೇಲ್ಯೂರ್ ಬಗ್ಗೆ ಏನನ್ನೂ ಹೇಳೋಕಾಗಲ್ಲ, ಡೇಟಾ ಅಧ್ಯಯನ ಮಾಡಿ ಮಾಹಿತಿ ನೀಡ್ತೇವಿ.. ಸುದ್ದಿಗೋಷ್ಠಿ ರದ್ದಾಗಿದೆ ಎಂದು ಪ್ರಕಟಿಸಿದರು ಸಿಗ್ನಲ್ ಸಂಪರ್ಕ ಕಡೆದುಕೊಂಡ ವೇಳೆ ನ್ಯೂಯಾರ್ಕ್ ಟೈಮ್ಸ್ ಹೇಳಿದ್ದೇನು?
ಇನ್ನು ಅಮೆರಿಕದ ಪ್ರತಿಷ್ಠಿತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಭಾರತ ಸಾಪ್ಟ್ ಲ್ಯಾಂಡಿಂಗ್ ಮಾಡಿದ ರಾಷ್ಟ್ರಗಳಿಗೆ ಸೇರಲು ಮತ್ತೊಂದು ಬಾಹ್ಯಾಕಾಶ ನೌಕೆ ಹಾರಿ ಬಿಡುವ ಪ್ರಯತ್ನ ಮಾಡಬೇಕಾಗುತ್ತದೆ ಎನ್ನುವ ಮೂಲಕ ಚಂದ್ರಯಾನ -2 ಭಾಗಶಃ ವಿಫಲವಾಗಿದೆ ಎಂದು ಸುದ್ದಿ ಬಿತ್ತರಿಸಿದೆ.