- ಸುದ್ದಿಗೋಷ್ಠಿ ರದ್ಧುಗೊಳಿಸಿದ ಇಸ್ರೋ ಸಂಸ್ಥೆ
- ಚಂದ್ರಯಾನ ಮಿಷನ್-2ಗೆ ಸಹಕಾರ ನೀಡಿದ ಎಲ್ಲರಿಗೂ ಇಸ್ರೋ ಧನ್ಯವಾದ
LIVE : ಚಂದ್ರನ ಹತ್ತಿರ ಹೋಗಿ ಸಂಪರ್ಕ ಕಳೆದುಕೊಂಡ ಲ್ಯಾಂಡರ್... ಡೇಟಾ ಕಲೆ ಹಾಕುತ್ತಿರುವ ಇಸ್ರೋ! - ಚಂದ್ರಯಾನ 2 ಲ್ಯಾಂಡಿಂಗ್ ಸುದ್ದಿ

03:11 September 07
ಸುದ್ದಿಗೋಷ್ಠಿ ರದ್ಧು ಮಾಡಿದ ಇಸ್ರೋ ಸಂಸ್ಥೆ
02:20 September 07
ಚಂದ್ರನ ಹತ್ತಿರ ಹೋಗಿ ಸಂಪರ್ಕ ಕಳೆದುಕೊಂಡ ಲ್ಯಾಂಡರ್... ಡೇಟಾ ಕಲೆ ಹಾಕುತ್ತಿರುವ ಇಸ್ರೋ!
- ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ
- ವಿಕ್ರಂ ಲ್ಯಾಂಡರ್ನಿಂದ ಸಂಪರ್ಕ ಕಡಿತ, ವಿಜ್ಞಾನಿಗಳೊಂದಿಗೆ ಮೋದಿ ಧೈರ್ಯ
- ದೇಶದ ಜನರಿಗೆ ನಿಮ್ಮ ಮೇಲೆ ಗೌರವವಿದೆ, ನನ್ನ ಕಡೆಯಿಂದ ನಿಮಗೆ ಅಭಿನಂದನೆಗಳು
- ದೇಶಕ್ಕೆ ನಿಮ್ಮಿಂದ ಬಹಳಷ್ಟು ಸೇವೆ ಸಿಕ್ಕಿದೆ. ಧೈರ್ಯದಿಂದ ಕೆಲಸ ಮಾಡಿ,ವಿಜ್ಞಾನಿಗಳ ಬೆನ್ನುತಟ್ಟಿದ ಮೋದಿ
- ಮುಂದಿಟ್ಟ ಹೆಜ್ಜೆಯನ್ನ ಹಿಂದೆ ಇಡುವುದು ಬೇಡ, ಒಳ್ಳೆಯದಾಗಲಿ
02:17 September 07
ಪದೇ ಪದೇ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ
- ಪದೇ ಪದೇ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ
- ಇಸ್ರೋ ಅಧ್ಯಕ್ಷರಿಂದ ಮಾಹಿತಿ,2.1ಕಿ,ಮೀ ಹಂತದ ವರೆಗೆ ಸಹಜವಾಗಿತ್ತು. ತದನಂತರ ಸಂಪರ್ಕ ಕಡಿತ
- ಲ್ಯಾಂಡರ್ನ ಮಾಹಿತಿ ಕಲೆ ಹಾಕುತ್ತಿರುವ ಇಸ್ರೋ ವಿಜ್ಞಾನಿಗಳು
02:11 September 07
ವಿಕ್ರಂ ಲ್ಯಾಂಡರ್ನಿಂದ ಸಿಗ್ನಲ್ ಆರಂಭ
- ವಿಕ್ರಂ ಲ್ಯಾಂಡರ್ನಿಂದ ಸಿಗ್ನಲ್ ಆರಂಭ
- ಆರ್ಬಿಟರ್ನಿಂದ ಸಂವಹನ ಆರಂಭ
- ಇಸ್ರೋ ಯಶಸ್ವಿಗೆ ಇನ್ನೊಂದೇ ಮೆಟ್ಟಿಲು
- ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿರುವ ವಿಕ್ರಂ ಲ್ಯಾಂಡರ್
02:03 September 07
ವಿಕ್ರಂ ಸಿಗ್ನಲ್ಗೆ ಎದುರು ನೋಡುತ್ತಿರುವ ವಿಜ್ಞಾನಿಗಳು
- ವಿಕ್ರಂ ಲ್ಯಾಂಡರ್ನ ಸಿಗ್ನಲ್ಗಾಗಿ ಕಾಯುತ್ತಿರುವ ಇಸ್ರೋ ವಿಜ್ಞಾನಿಗಳು
- ವಿಕ್ರಂನಿಂದ ಲಭ್ಯವಾಗದ ಸಿಗ್ನಲ್, ಕಾಯುತ್ತಿರುವ ವಿಜ್ಞಾನಿಗಳು
01:59 September 07
ಮಿಷನ್ ಕಂಟ್ರೋಲ್ ರೂಮ್ನಲ್ಲಿ ಏನಾಗುತ್ತದೆ ಎಂಬ ಕಾತರ
- ಮಿಷನ್ ಕಂಟ್ರೋಲ್ ರೂಮ್ನಲ್ಲಿ ಏನಾಗುತ್ತದೆ ಎಂಬ ಕಾತರ
- ಮೋದಿ ಅವರ ಮುಖದಲ್ಲೂ ಕುತೂಹಲ
- ವಿಕ್ರಂ ಲ್ಯಾಂಡರ್ ಚಿತ್ರಣ ಇಸ್ರೋಗೆ ಲಭ್ಯ
- ಪ್ರಧಾನಿ ಮೋದಿ ಅವರಿಗೆ ಚಂದ್ರಯಾನ -2 ಅಂತಿಮ ಕ್ಷಣಗಳ ಮಾಹಿತಿ ನೀಡುತ್ತಿರುವ ಕೆ ಸಿವನ್
- ವಿದ್ಯಾರ್ಥಿಗಳಿಂದಲ್ಲೂ ಚಂದ್ರಯಾನ-2 ಲ್ಯಾಂಡಿಂಗ್ ನೇರ ವೀಕ್ಷಣೆ
- ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಕೆ ಸಿವನ್
- ವಿದಳನ ಹಂತ ಪೂರ್ಣಗೊಳಿಸಿದ ವಿಕ್ರಂ ಲ್ಯಾಂಡರ್
01:41 September 07
ಚಂದ್ರನತ್ತ ವಿಕ್ರಮ ಲ್ಯಾಂಡರ್
- ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ
- ಚಂದ್ರಯಾನ ಲ್ಯಾಂಡಿಂಗ್ನ ಪ್ರತಿ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಮೋದಿ
- ಮಕ್ಕಳೊಂದಿಗೆ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ಮೋದಿ
- ಚಂದ್ರನ ಅಂಗಳಕ್ಕಿಳಿಯಲು ಕೇವಲ 30 ಕಿ.ಮೀ ಅಂತರ ದೂರು
01:30 September 07
ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ
- ಇಸ್ರೋ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
- ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಮೋದಿ ಆಗಮನ
- ಚಿಣ್ಣರೊಂದಿಗೆ ಚಂದ್ರಯಾನ-2 ವೀಕ್ಷಣೆ ಮಾಡಲಿರುವ ನಮೋ
- ದಕ್ಷಿಣದ ಅಂಗಳದಲ್ಲಿ ಇಳಿಯಲಿರುವ ಚಂದ್ರಯಾನ-2
01:18 September 07
ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ
01:07 September 07
ಚಂದ್ರನ ನೆಲಕ್ಕೆ ವಿಕ್ರಂ ಹತ್ತಿರ ಹತ್ತಿರ
- ಇಸ್ರೋ ಸಾಧನೆಗೆ ಇನ್ನೊಂದೇ ಮೆಟ್ಟಿಲು
- ಮಹತ್ವದ ಕ್ಷಣಕ್ಕೆ ಕ್ಷಣಗಣನೆ ಆರಂಭ
- ಇಸ್ರೋ ಕೇಂದ್ರದಿಂದ ನೇರ ಪ್ರಸಾರ
01:03 September 07
00:52 September 07
ಪ್ರಧಾನಿ ಜತೆ ಹೈಸ್ಕೂಲ್ ವಿದ್ಯಾರ್ಥಿಗಳ ಚಂದ್ರಯಾನ ವೀಕ್ಷಣೆ
ರಾಯಚೂರು ಜಿಲ್ಲೆಯ ಸಿಂಧನೂರಿನ ವೃಷ್ಣವಿ, ಕೇರಳದ ಇಬ್ಬರು ಸೇರಿ 12 ವಿದ್ಯಾರ್ಥಿಗಳು ಚಂದ್ರಯಾನ -2 ವೀಕ್ಷಣೆಗೆ ಸಜ್ಜಾಗಿ ಇಸ್ರೋ ಕೇಂದ್ರದಲ್ಲಿ ಕಾತರದಿಂದ ಕಾಯುತ್ತಿದ್ದಾರೆ.
ಶಿವಾನಿ ಎಸ್ ಪ್ರಭು, ಹೋಲಿ ಆ್ಯಂಗಲ್ ಐಸಿಎಸ್ ಸ್ಕೂಲ್ನ 10ನೇ ತರಗತಿಯ ವಿದ್ಯಾರ್ಥಿನಿ. 9ನೇ ಕ್ಲಾಸ್ನ ಅಹಮ್ಮದ್ ತನ್ವೀರ್ ಪ್ರಧಾನಿ ಮೋದಿ ಜತೆ ಚಂದ್ರನಲ್ಲಿ ವಿಕ್ರಮಕ್ಕೆ ಕಾತರರಾಗಿದ್ದಾರೆ.
23:46 September 06
ಚಂದ್ರಯಾನ-2 ಲ್ಯಾಂಡಿಂಗ್ಗೆ ಕ್ಷಣಗಣನೆ
- 1.53ಕ್ಕೆ ಚಂದ್ರನ ಅಂಗಳಕ್ಕೆ ಚಂದ್ರಯಾನ-2
- 4.23ಕ್ಕೆ ವಿಕ್ರಮ್ ಲ್ಯಾಂಡರ್ನಿಂದ ಬೇರ್ಪಡಲಿರುವ ಪ್ರಗ್ಯಾನ್ ರೋವರ್
21:55 September 06
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
- ಚಂದ್ರಯಾನ-2 ಚಂದ್ರನ ಮೇಲೆ ಲ್ಯಾಂಡಿಂಗ್ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
- ಬೆಂಗಳೂರಿನ ಇಸ್ರೋ ಕೇಂದ್ರದಿಂದ ಲ್ಯಾಂಡಿಂಗ್ ವೀಕ್ಷಿಸಲಿರುವ ಪಿಎಂ
- ಬೆಂಗಳೂರಿನ ಯಲಹಂಕ ವಾಯುನೆಲೆಗೆ ಆಗಮಿಸಿದ ಪ್ರಧಾನಿ ಮೋದಿ
-
ಮೋದಿಗೆ ಸ್ವಾಗತ ಕೋರಿದ ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಬಿಎಸ್ವೈ
20:47 September 06
ಚಂದ್ರನ ಹತ್ತಿರ ಹೋಗಿ ಸಂಪರ್ಕ ಕಳೆದುಕೊಂಡ ಲ್ಯಾಂಡರ್... ಡೇಟಾ ಕಲೆ ಹಾಕುತ್ತಿರುವ ಇಸ್ರೋ!
ಹೈದರಾಬಾದ್:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಮಹಾತ್ವಾಕಾಂಕ್ಷಿ ಬಾಹುಬಲಿ ಚಂದ್ರಯಾನ-2 ಲ್ಯಾಂಡಿಂಗ್ ಶನಿವಾರ ಮುಂಜಾನೆ 1.30ರಿಂದ 2.20ರ ಅವಧಿಯಲ್ಲಿ ನಡೆಯಲಿದೆ. ಚಂದ್ರಯಾನ-2 ಚಂದ್ರನ ಮೇಲೆ ಇಳಿಯುವ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.