ಹೈದರಾಬಾದ್:ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ ಬಹುತೇಕ ಯಶಸ್ವಿಯಾಗಿ ಸಾಗುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ. ಈ ನೌಕೆ ಶಶಿಗೆ ಮತ್ತಷ್ಟು ಹತ್ತಿರವಾಗಿದೆ.
ಎರಡನೇ ಕಕ್ಷೆಯಿಂದ ಚಂದ್ರಯಾನ-2 ಯಶಸ್ವಿಯಾಗಿ ಬೇರ್ಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಇಸ್ರೋ ಮಾಹಿತಿ ನೀಡಿದೆ. ನಿನ್ನೆಯಷ್ಟೇ ಚಂದ್ರಯಾನ-2 ಆರ್ಬಿಟರ್ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು, ಇದೀಗ ಮೂನ್ ಲ್ಯಾಂಡರ್ ಎಂಜಿನ್ ಚಾಲನೆ ಮಾಡುವ ಮೂಲಕ ನೌಕೆಯನ್ನು 96 X 125ಕಿ.ಮೀ ವ್ಯಾಪ್ತಿಯೊಳಗೆ ತಳ್ಳಿದ್ದಾರೆ. ಇದು ಅತ್ಯಂತ ಸಂಕೀರ್ಣ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಮೂನ್ ಲ್ಯಾಂಡರ್ ಮತ್ತು ರೋವರನ್ನು ಇಳಿಸುವ ಕಾರ್ಯಾಚರಣೆಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.