ಕರ್ನಾಟಕ

karnataka

ETV Bharat / bharat

ಚಂದ್ರಯಾನ-2: ಕಕ್ಷೆ ಮೇಲಕ್ಕೆತ್ತರಿಸುವ ಕಾರ್ಯದಲ್ಲಿ ವಿಜ್ಞಾನಿಗಳಿಗೆ ಯಶಸ್ಸು - ಚಂದ್ರಯಾನ 2 ಸುದ್ದಿ

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22 ರಂದು ಉಡಾವಣೆಯಾದ ಚಂದ್ರಯಾನ- 2 ಮುಂದಿನ ತಿಂಗಳು ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈ ತಲುಪಲಿದೆ.

ನಾಲ್ಕನೇ ಕಕ್ಷೆಯ ಸುತ್ತನ್ನು ಯಶಸ್ವಿಯಾಗಿ ಮುಗಿಸಿ ಚಂದ್ರಯಾನ 2

By

Published : Aug 2, 2019, 5:11 PM IST

Updated : Aug 2, 2019, 5:29 PM IST

ನವ ದೆಹಲಿ: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ-2 ನೌಕೆಯ ಕಕ್ಷೆ ಮೇಲಕ್ಕೆತ್ತರಿಸುವ ಕಾರ್ಯ ನಡೆಯುತ್ತಿದೆ. ಇತ್ತೀಚೆಗಿನ ಮಾಹಿತಿ ಪ್ರಕಾರ, ನಾಲ್ಕನೇ ಸುತ್ತಿನ ಕಕ್ಷೆ ಮೇಲಕ್ಕೆತ್ತರಿಸುವ ಕಾರ್ಯವನ್ನು(Orbit-raising maneuver) ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಚಂದ್ರಯಾನ-2 ತನ್ನ ನಿಗದಿತ ಗುರಿ ತಲುಪಲು ಒಂದು ಹೆಜ್ಜೆ ಹತ್ತಿರದಲ್ಲಿಯೇ ಇದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22 ರಂದು ಉಡಾವಣೆಯಾದ ಈ ನೌಕೆ ಸೆಪ್ಟೆಂಬರ್ 7 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ.

ಕಕ್ಷೆ ಮೇಲಕ್ಕೆತ್ತರಿಸುವ ಕೊನೆಯ ಸುತ್ತಿನ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಆ. 6ಕ್ಕೆ ಮಾಡಲಿದ್ದಾರೆ.

ಚಂದ್ರಯಾನ-2 ಮಿಷನ್​ ಕೊನೆಯ ಸುತ್ತನ್ನು ತಲುಪುವವರೆಗೂ ಹಲವಾರು ಅಡೆತಡೆಗಳನ್ನು ಎದುರಿಸಿಕೊಂಡೇ ಹೋಗಬೇಕಾಗುತ್ತದೆ. ಇಲ್ಲಿಯವರೆಗೆ ಯಾವುದೇ ರೀತಿಯ ಅಡೆತಡೆಗಳಿಲ್ಲದೆ ನೌಕೆ ಯಶಸ್ವಿಯಾಗಿ ಚಂದ್ರನೂರಿಗೆ ಮುನ್ನುಗ್ಗುತ್ತಿದೆ.

Last Updated : Aug 2, 2019, 5:29 PM IST

ABOUT THE AUTHOR

...view details