ಹೈದರಾಬಾದ್:ಮುನ್ನಡೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಕೇಂದ್ರದಲ್ಲಿ ತೃತೀಯರಂಗದ ಪ್ರಮುಖ ನಾಯಕರಲ್ಲಿ ಗುರುತಿಸಿಕೊಂಡಿದ್ದ ಚಂದ್ರಬಾಬು ನಾಯ್ಡುಗೆ ಈಗಿನ ಲೆಕ್ಕಾಚಾರ ಮುಜುಗರ ತಂದಿದೆ.
ಈ ನಡುವೆ ಆಂಧ್ರದಲ್ಲಿ ಭಾರಿ ಹವಾ ಕ್ರಿಯೇಟ್ ಮಾಡಿದ್ದ ಪವನ್ ಕಲ್ಯಾಣ್ ಅಣ್ಣನಂತೆ ಪ್ಲಾಪ್ ಶೋ ನಡೆಸಿದ್ದಾರೆ. ಇವರ ಜನಸೇನಾ ಪಾರ್ಟಿ ಸದ್ಯಕ್ಕೆ ಖಾತೆ ತೆರೆಯಲು ವಿಫಲವಾಗಿದೆ.