ಕರ್ನಾಟಕ

karnataka

ETV Bharat / bharat

'ಚಲೋ ಆತ್ಮಕೂರ್'​ ರ್‍ಯಾಲಿಗೆ ಮುನ್ನವೇ ಶಾಕ್​...! ಚಂದ್ರಬಾಬು ನಾಯ್ಡು ಸೇರಿ ಹಲವರಿಗೆ ಗೃಹಬಂಧನ - ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡ

ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್ ಪಕ್ಷ ಟಿಡಿಪಿಯ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ವಿನಾಕಾರಣ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಟಿಡಿಪಿ ಇಂದು ರ್‍ಯಾಲಿಗೆ ಕರೆಕೊಟ್ಟಿತ್ತು.

ಗೃಹಬಂಧನ

By

Published : Sep 11, 2019, 10:15 AM IST

ಅಮರಾವತಿ(ಆಂಧ್ರ ಪ್ರದೇಶ):ಟಿಡಿಪಿ ಮುಖ್ಯಸ್ಥ ಮತ್ತು ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡ ಹಾಗೂ ಪುತ್ರ ನರ ಲೋಕೇಶ್​ರನ್ನು ಸದ್ಯ ಗೃಹ ಬಂಧನದಲ್ಲಿಡಲಾಗಿದೆ.

ಚಲೋ ಆತ್ಮಕೂರ್ ರ್‍ಯಾಲಿಗೆ ಅನುಮತಿ ನಿರಾಕರಿಸಿದ ಪೊಲೀಸರು

ಇಂದು ಬೆಳಗ್ಗೆ 8ರಿಂದ ಸಂಜೆ 8ರವರೆಗೆ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಟಿಡಿಪಿ 'ಚಲೋ ಆತ್ಮಕೂರ್' ರ್‍ಯಾಲಿಯನ್ನು ಹಮ್ಮಿಕೊಂಡಿದ್ದರು. ಆದರೆ, ಈ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಸದ್ಯ ಟಿಡಿಪಿ ಮುಖ್ಯಸ್ಥರನ್ನು ಸೇರಿದಂತೆ ಪಕ್ಷದ ಹಲವು ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ.

ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್ ಪಕ್ಷ ಟಿಡಿಪಿಯ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ವಿನಾಕಾರಣ ದರ್ಪ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ ಟಿಡಿಪಿ ಇಂದು ರ್‍ಯಾಲಿಗೆ ಕರೆಕೊಟ್ಟಿತ್ತು.

ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲು ನರಸರಾವ್​ಪೇಟ, ಸಟ್ಟೇನಾಪಲ್ಲಿ, ಪಾಲ್ನಾಡು ಹಾಗೂ ಗುಜರಾಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆ ರಾಜ್ಯದಲ್ಲಿ ಯಾವುದೇ ರ್‍ಯಾಲಿ, ಸಭೆ, ಮೆರವಣಿಗೆಗೆ ಅನುಮತಿ ಇಲ್ಲ ಎಂದು ಡಿಜಿಪಿ ಗೌತಮ್ ಸವಂಗ್ ಹೇಳಿದ್ದಾರೆ.

ABOUT THE AUTHOR

...view details