ಚಂಡೀಗಢ:ಗುರುನಾನಕ್ ಜಯಂತಿ ಹಿನ್ನೆಲೆ ಚಂಡೀಗಢ ಮೂಲದ ಕಲಾವಿದ ವರುಣ್ ಟಂಡನ್, ಗುರುನಾನಕ್ ಅವರ ಕಾಲ್ಪನಿಕ ಭಾವಚಿತ್ರವನ್ನು ರಚಿಸಿದ್ದಾರೆ.
ಗುರುನಾನಕ್ ಜಯಂತಿ: ನಾನಕ್ ಕಾಲ್ಪನಿಕ ಭಾವಚಿತ್ರ ಅರಳಿಸಿದ ಕಲಾವಿದ
ಇಂದು ಗುರುನಾನಕ್ ಜಯಂತಿ ಹಿನ್ನೆಲೆ ಚಂಡೀಗಢ ಮೂಲದ ಕಲಾವಿದನೊಬ್ಬ ಗುರು ಗ್ರಂಥ ಸಾಹಿಬ್ನ ಆರಂಭಿಕ ಪದಗಳಾದ 'ಏಕ್ ಓಂಕಾರ್ ಅನ್ನು ಬಳಸಿ ಗುರುನಾನಕ್ ಅವರ ಕಾಲ್ಪನಿಕ ಭಾವಚಿತ್ರವನ್ನು ಮೂಡಿಸಿದ್ದಾರೆ.
ಈ ಭಾವಚಿತ್ರವನ್ನು ಚಂಡೀಗಢದ ಸೆಕ್ಟರ್ 34 ನ ಗುರುದ್ವಾರ ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ನಲ್ಲಿ ಇಡಲಾಗಿದೆ. ಕಲಾವಿದ ವರುಣ್ ಟಂಡನ್ ಈ ಕುರಿತು ಪ್ರತಿಕ್ರಿಯಿಸಿ, "ನಾನು ಇದನ್ನು 551 'ಏಕ್ ಓಂಕಾರ್' (ಗುರು ಗ್ರಂಥ ಸಾಹಿಬ್ನ ಆರಂಭಿಕ ಪದಗಳು) ಬಳಸಿ ಮಾಡಿದ್ದೇನೆ" ಎಂದು ಹೇಳಿದರು. ದೂರದಿಂದ ಚಿತ್ರವನ್ನು ನೋಡಿದರೆ ಗುರುನಾನಕ್ ದೇವ್ ಅವರ ಹತ್ತಿರದ ನೋಟ ಮತ್ತು ನೀವು 'ಏಕ್ ಓಂಕರ್' ನೋಡುತ್ತೀರಿ. ಇದು ಕಾಲ್ಪನಿಕ ಭಾವಚಿತ್ರ ಎಂದ್ರು. ಇವರು ಈ 'ಏಕ್ ಓಂಕಾರ್' ರಚಿಸಲು 13 ವಿವಿಧ ಬಣ್ಣಗಳನ್ನು ಬಳಸಿದ್ದಾರೆ. ಸುಮಾರು 1102 ಕಬ್ಬಿಣದ ಮೊಳೆಗಳನ್ನು ಬಳಸಿ ಶ್ರೀ ಗುರುನಾನಕ್ ದೇವ್ ಅವರ 6 ರಿಂದ 4 ಅಡಿ ಭಾವಚಿತ್ರವನ್ನು ಈ ಕಲಾವಿದ ರಚಿಸಿದ್ದಾರೆ.
ಇನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಗುರುನಾನಕ್ ಜಯಂತಿಯನ್ನು ಕಾರ್ತಿಕ ತಿಂಗಳ ಹುಣ್ಣಿಮೆಯ ದಿನದಂದು ದೇಶಾದ್ಯಂತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನು ಕಾರ್ತಿಕ ಪೂರ್ಣಿಮಾ ಎಂದೂ ಕೂಡ ಕರೆಯಲಾಗುತ್ತೆ.