ನವದೆಹಲಿ:ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ-ಮಗಳ ಚಿನ್ನದ ಚೈನ್ ಕಸಿದುಕೊಳ್ಳಲು ಯತ್ನಿಸಿದ ಕಳ್ಳರಿಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಘಟನೆ ನಗರದ ನಂಗ್ಲೋಯಿನಲ್ಲಿ ನಡೆದಿದೆ.
ಕೊರಳ ಚಿನ್ನಕ್ಕೆ ಕೈ ಹಾಕಿದ ಕಳ್ಳರು... ತಕ್ಕ ಪಾಠ ಕಲಿಸಿದ ತಾಯಿ - ಮಗಳು! - ನವದೆಹಲಿ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಆಕೆಯ ಮಗಳ ಚಿನ್ನದ ಚೈನ್ ಕಸಿದುಕೊಳ್ಳಲು ಯತ್ನಿಸಿದ ಕಳ್ಳರಿಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕಳ್ಳರನ್ನು ತಾಯಿ ಹಾಗೂ ಮಗಳು ಬೈಕ್ನಿಂದ ಕೆಳಹಾಕಿ ಧರ್ಮದೇಟು ನೀಡಿ ಚಳಿ ಬಿಡಿಸಿದ್ದಾರೆ.
ತಾಯಿ ಹಾಗೂ ಮಗಳು ನಂಗ್ಲೋಯಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ಬೈಕ್ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಇಬ್ಬರು ಕಳ್ಳರು ಇವರನ್ನು ಗಮನಿಸಿದ್ದಾರೆ. ಆ ವೇಳೆ ಬೈಕ್ನ ಹಿಂಬದಿ ಸವಾರ ತಾಯಿಯ ಕೊರಳಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಕಿತ್ತಿದ್ದಾನೆ. ಆ ಸಂದರ್ಭ ಹಿಂದೆ ಮುಂದೆ ನೋಡದ ತಾಯಿ ಧೈರ್ಯದಿಂದ ಆತನ ಕೈ ಹಿಡಿದು ಕೆಳಗೆ ಎಳೆದಿದ್ದಾಳೆ. ಈ ವೇಳೆ ಮಗಳು ಕೂಡಾ ಸಾಥ್ ನೀಡಿ ಆತನಿಗೆ ಹಿಗ್ಗಾ ಮುಗ್ಗ ಥಳಿಸಿದ್ದಾಳೆ. ಬಳಿಕ ಸ್ಥಳಿಯರೆಲ್ಲಾ ಸೇರಿ ಕಳ್ಳನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ.
ಇದೇ ವೇಳೆ ಬೈಕ್ನ ಮುಂಬದಿ ಸವಾರ ಓಡಲು ಯತ್ನಿಸಿದ್ದು, ಸ್ಥಳದಿಂದ ಆ ಕ್ಷಣ ತಪ್ಪಿಸಿಕೊಂಡಿದ್ದಾನೆ. ಬಳಿಕ ಈ ಇಬ್ಬರು ಕಳ್ಳರನ್ನೂ ಪೊಲೀಸರು ಬಂಧಿಸಿದ್ದಾರೆ.