ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರದ ನೀತಿಗಳಿಂದ 14 ಕೋಟಿ ಜನರಿಗೆ ನಿರುದ್ಯೋಗ: ರಾಹುಲ್ ಕಿಡಿ - ರೋಜಗಾರ್ ದೋ

ಮೋದಿ ಸರ್ಕಾರದ ನೀತಿಗಳಿಂದಲೇ ದೇಶದ ಆರ್ಥಿಕತೆ ನೆಲಕಚ್ಚಿ, ನಿರುದ್ಯೋಗ ಸಮಸ್ಯೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.

ರಾಹುಲ್ ಗಾಂಧಿ ಕಿಡಿ
ರಾಹುಲ್ ಗಾಂಧಿ ಕಿಡಿ

By

Published : Aug 9, 2020, 5:20 PM IST

ನವದೆಹಲಿ: ದೇಶದಲ್ಲಿನ ನಿರುದ್ಯೋಗ ಸಮಸ್ಯೆಯ ಕುರಿತು ಧ್ವನಿ ಎತ್ತಿರುವ ಯುವ ಕಾಂಗ್ರೆಸ್, ರಾಷ್ಟ್ರವ್ಯಾಪಿ ರೋಜಗಾರ್ ದೋ ಹೆಸರಿನಲ್ಲಿ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಟ್ವಿಟರ್​​ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿರುವ ರಾಹುಲ್ ಗಾಂಧಿ, ಕೇಂದ್ರದ ಪಾಲಿಸಿಗಳಿಂದಲೇ ದೇಶದಲ್ಲಿ 14 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ ಎಂದು ದೂರಿದ್ದಾರೆ.

ಮೋದಿ ಸರ್ಕಾರದ ಮನ್ ಕೀ ಬಾತ್ ಉದ್ಯೋಗ ನೀಡಿದೆಯೇ ಎಂದು ಲೇವಡಿ ಮಾಡಿರುವ ರಾಹುಲ್, ರೋಜಗಾರ್ ದೋ ಅಭಿಯಾನದಲ್ಲಿ ಭಾಗವಹಿಸುವಂತೆ ಯುವಕರಿಗೆ ಕರೆ ನೀಡಿದ್ದಾರೆ.

ಕೇಂದ್ರದ ನೋಟು ಅಮಾನ್ಯೀಕರಣ, ಜಿಎಸ್​​ಟಿ ಹಾಗೂ ಲಾಕ್​ಡೌನ್ ನೀತಿಯಿಂದ ದೇಶದ ಹಣಕಾಸು ರಚನೆಯೇ ನೆಲಸಮವಾಗಿದೆ. ಇದರಿಂದ ಯುವಕರಿಗೆ ಉದ್ಯೋಗ ಸಿಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ABOUT THE AUTHOR

...view details