ಕರ್ನಾಟಕ

karnataka

ETV Bharat / bharat

3 ರಾಜ್ಯಗಳಿಗೆ ಕೇಂದ್ರದ ಪರಿಶೀಲನಾ ತಂಡಗಳು - 3 ರಾಜ್ಯಗಳಿಗೆ ಕೇಂದ್ರದ ಪರಿಶೀಲನಾ ತಂಡಗಳು

ಕೊರೊನಾ ವೈರಸ್ ನಿಯಂತ್ರಣ ಮತ್ತು ಲಾಕ್ ಡೌನ್ ಉಲ್ಲಂಘನೆಯ ಆರೋಪಗಳನ್ನು ತನಿಖೆ ಮಾಡಲು ಗುಜರಾತ್, ತೆಲಂಗಾಣ ಮತ್ತು ತಮಿಳುನಾಡಿಗೆ ಕೇಂದ್ರ ತನ್ನ ತಂಡಗಳನ್ನು ನಿಯೋಜಿಸಿದೆ.

covid
covid

By

Published : Apr 25, 2020, 8:15 AM IST

ನವದೆಹಲಿ: ಗುಜರಾತ್, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಲಾಕ್‌ಡೌನ್ ಉಲ್ಲಂಘನೆಯ ವರದಿಗಳು ಬಂದ ಹಿನ್ನೆಲೆ, ಕೇಂದ್ರ ಗೃಹ ಸಚಿವಾಲಯವು ಕೇಂದ್ರದ ತಂಡಗಳನ್ನು ಈ ರಾಜ್ಯಗಳ ಐದು ಭಾಗಗಳಿಗೆ ಕಳುಹಿಸಿದೆ.

"ಈ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ಮೇಲಿನ ದೌರ್ಜನ್ಯ, ಸಾಮಾಜಿಕ ಅಂತರದ ಉಲ್ಲಂಘನೆ, ಕ್ವಾರಂಟೈನ್​ಗೆ ವಿರೋಧ ಕಂಡುಬರುತ್ತಿದೆ" ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಗಸೂಚಿಗಳ ಪ್ರಕಾರ ಲಾಕ್‌ಡೌನ್ ಕ್ರಮಗಳ ಅನುಷ್ಠಾನ ಮತ್ತು ಅನುಸರಣೆ, ಅಗತ್ಯ ವಸ್ತುಗಳ ಪೂರೈಕೆ, ಸಾಮಾಜಿಕ ಅಂತರ, ಆರೋಗ್ಯದ ಮೂಲ ಸೌಕರ್ಯಗಳ ಸಿದ್ಧತೆ, ಆರೋಗ್ಯ ಸಿಬ್ಬಂದಿಯ ಸುರಕ್ಷತೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸಲು ಕೇಂದ್ರ ತನ್ನ ತಂಡವನ್ನು ಈ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ನಿಯೋಜಿಸಿದೆ.

ABOUT THE AUTHOR

...view details