ನವದೆಹಲಿ:ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬೆನ್ನಲ್ಲೇ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತ್ತು.
ಸದ್ಯ ನೂತನ ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆರಂಭದಲ್ಲಿ ಸುಮಾರು 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲು ಕೇಂದ್ರ ಚಿಂತನೆ ನಡೆಸಿದೆ.
'ವಿಶೇಷ' ನಿರ್ಧಾರ ಪ್ರಶ್ನಿಸಿದ ಅರ್ಜಿ ಇಂದು ಸುಪ್ರೀಂನಲ್ಲಿ ವಿಚಾರಣೆ..!
ಆರಂಭಿಕ ಹಂತದಲ್ಲಿ ಐವತ್ತು ಸಾವಿರ ಮಂದಿಯನ್ನು ಪ್ಯಾರಾಮಿಲಿಟರಿ ಪಡೆಗೆ ಸೇರ್ಪಡೆ ಮಾಡುವ ಉದ್ದೇಶ ಕೇಂದ್ರದ ಮುಂದಿದೆ. ಗೃಹ ಖಾತೆ ಕಾರ್ಯದರ್ಶಿ ಅಜಯ್ ಭಲ್ಲಾ ನೇತೃತ್ವದಲ್ಲಿ ಮಂಗಳವಾರದಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಣಿವೆ ರಾಜ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಸಲಾಗಿದೆ.
ಈ ಉದ್ಯೋಗ ಸೃಷ್ಟಿಯ ಜೊತೆಗೆ ಇನ್ನಿತರ ಕಂಪನಿಗಳು ತಮ್ಮ ಬ್ರಾಂಚ್ಗಳನ್ನು ಕಣಿವೆ ರಾಜ್ಯದಲ್ಲಿ ತೆರೆಯಲು ಮುಂದಾಗಿವೆ. ಇದು ಸಹ ಅಲ್ಲಿನ ನಿವಾಸಿಗಳಿಗೆ ಉದ್ಯೋಗ ನೀಡಲಿದೆ.