ನವದೆಹಲಿ: ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿ ರಾಜ್ಯಗಳ ಪಾಲನ್ನು ಹಂಚಿಕೆ ಮಾಡಲು ಮೇ ಕಂತಿಗಾಗಿ 46,038.70 ಕೋಟಿ ರೂ.ಗಳನ್ನು ಹಣಕಾಸು ಸಚಿವಾಲಯವು ಮಂಜೂರು ಮಾಡಿದ್ದು, ಅದರಲ್ಲಿ 1678.57 ಕೋಟಿ ರೂ. ಕರ್ನಾಟಕಕ್ಕೆ ಹಂಚಿಕೆಯಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾದಂತೆ, ಈ ತಿಂಗಳಿನಲ್ಲಿಯೂ ರಾಜ್ಯವಾರು ಹಂಚಿಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳ ಆದಾಯವನ್ನು ರಕ್ಷಿಸುವುದು ಮತ್ತು ಅಗತ್ಯತೆಗಳನ್ನು ಪೂರೈಸುವುದು ಭಾರತ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವಾಲಯ ಹೇಳಿದೆ.
ಆಂಧ್ರಪ್ರದೇಶಕ್ಕೆ 1,892.64 ಕೋಟಿ, ಅಸ್ಸಾಂಗೆ 1,441.48 ಕೋಟಿ, ಗುಜರಾತ್‌ಗೆ 1,564.4 ಕೋಟಿ, ಪಶ್ಚಿಮ ಬಂಗಾಳಕ್ಕೆ 3,461.65 ಕೋಟಿ, ಉತ್ತರ ಪ್ರದೇಶಕ್ಕೆ 8,255.19 ಕೋಟಿ, ಕೇರಳಕ್ಕೆ 894.53 ಕೋಟಿ ಮತ್ತು ಬಿಹಾರಕ್ಕೆ 4,631.96 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.