ಕರ್ನಾಟಕ

karnataka

ETV Bharat / bharat

ರೈತರ ಎಲ್ಲಾ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧ: ಅಮಿತ್ ಶಾ

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ಸುತ್ತ ಇರುವ ರೈತರ ಎಲ್ಲಾ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ರೈತರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಶನಿವಾರ ತಿಳಿಸಿದ್ದಾರೆ.

ಅಮಿತ್​ ಶಾ
ಅಮಿತ್​ ಶಾ

By

Published : Nov 29, 2020, 5:17 AM IST

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾನೂನು ವಿರುದ್ಧ ದೆಹಲಿಯಲ್ಲಿ 6ಕ್ಕೂ ಹೆಚ್ಚು ರಾಜ್ಯಗಳ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲ ದಿನ ರೈತರು ದೆಹಲಿ ಪ್ರವೇಶಿಸಲು ಬಿಡದ ಪೊಲೀಸರು ನಂತರ ಹೋರಾಟಕ್ಕೆ ಮಣಿದು ಶಾಂತಿಯುತ ಹೋರಾಟ ನಡೆಸಲು ಅವಕಾಶ ನೀಡಿತ್ತು. ಇದೀಗ ರೈತರರೊಂದಿಗೆ ಮಾತುಕತೆಗೆ ಕೂಡ ಸಿದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ಸುತ್ತ ಇರುವ ರೈತರ ಎಲ್ಲಾ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ರೈತರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ ಎಂದು ಶನಿವಾರ ತಿಳಿಸಿದ್ದಾರೆ.

ಅಮಿತ್​ ಶಾ

" ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಭಾರತ ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದು ನಾನು ಮನವಿ ಮಾಡುತ್ತೇನೆ. ಕೃಷಿ ಕಾಯ್ದೆಯ ಕುರಿತು ರೈತರಲ್ಲಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಕೂಲಂಕುಶವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಡಿಸೆಂಬರ್​ 3 ರಂದು ಕೃಷಿ ಸಚಿವರು ಆಹ್ವಾನ ನೀಡಿದ್ದಾರೆ" ಎಂದು ಅಮಿತ್ ಶಾ ಸುದ್ಧಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ದೆಹಲಿಯ ಅನೇಕ ಸ್ಥಳಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ರೈತರು ತಮ್ಮ ಟ್ರಾಕ್ಟರ್​ಗಳೊಂದಿಗೆ ಕೊರೆಯುವ ಚಳಿಯಲ್ಲಿ ಕುಳಿತಿದ್ದಾರೆ. ಹಾಗಾಗಿ ನಿಮ್ಮನ್ನು ದೆಹಲಿಯ ದೊಡ್ಡ ಮೈದಾನಕ್ಕೆ ಸ್ಥಳಾಂತರಿಸಲು ಸಿದ್ಧರಿದ್ದಾರೆ. ದಯವಿಟ್ಟು ಎಲ್ಲಾ ಅಲ್ಲಿಗೆ ಹೋಗಿ , ಅಲ್ಲಿ ನಿಮ್ಮ ಕಾರ್ಯಕ್ರಮ ನಡೆಸಲು ಪೊಲೀಸ್ ಅನುಮತಿ ಸಿಗುತ್ತದೆ ಎಂದು ಶಾ ಮನವಿ ಮಾಡಿದ್ದಾರೆ.

ದೆಹಲಿಯ ಬುರಾರಿಯ ನಿರಂಕರಿ ಮೈದಾನದಲ್ಲಿ ಆರೋಗ್ಯ ಸೌಲಭ್ಯಗಳು, ಆಂಬುಲೆನ್ಸ್‌ಗಳು ಮತ್ತು ಕುಡಿಯುವ ನೀರಿನೊಂದಿಗೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

ABOUT THE AUTHOR

...view details