ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕು ತಡೆಯಲು ಕೇಂದ್ರವು ಸಾಕಷ್ಟು ಕೆಲಸ ಮಾಡ್ತಿಲ್ಲ: ಪಿ.ಚಿದಂಬರಂ ಆರೋಪ - ಕೊರೊನಾ ಸೋಂಕು

ಪ್ರಧಾನಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಂವಹನ ನಡೆಸಿ ಕೊರೊನಾ ಸೋಂಕು ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

centre-not-doing-enough-on-coronavirus-says-p-chidambaram
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ

By

Published : Mar 16, 2020, 3:36 PM IST

ನವದೆಹಲಿ: ಕೊರೊನಾ ಸೋಂಕು ತಡೆಯಲು ಕೇಂದ್ರವು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಬಿಜೆಪಿ ವಿರುದ್ಧ ಆರೋಪ ಮಾಡಿದರು.

ಪ್ರಧಾನಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಸಂವಹನ ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೊರೊನಾ ಸೋಂಕು ಹೆಚ್ಚುತ್ತಿದ್ದು, ಚಿಂತೆಗೀಡುಮಾಡುತ್ತಿದೆ. ಕಳೆದ ವಾರ ಸೋಂಕಿತರ ಸಂಖ್ಯೆ ಸುಮಾರು 32 ಆಗಿತ್ತು. ಈ ಭಾನುವಾರ 107 ಕ್ಕೆ ತಲುಪಿದೆ. ಇನ್ನೂ ಅನೇಕರು ಪರೀಕ್ಷೆಗೆ ಒಳಗಾಗಿದ್ದಾರೆ. ಇದರ ಬಗ್ಗೆ ಕೇಂದ್ರ ಗಮನಹರಿಸಬೇಕು ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸೆನ್ಸೆಕ್ಸ್ ಕೇವಲ ಒಂದು ಸೂಚಕವಾಗಿದೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಲೀಟರ್​ಗೆ 3 ರೂ.ಗೆ ಹೆಚ್ಚಿಸಿದೆ. ಸಾರಿಗೆ ಉದ್ಯಮವು ಈಗಾಗಲೇ ಕುಸಿದಿದ್ದು, ಕಡಿಮೆ ಬೇಡಿಕೆಯಿದೆ ಹಾಗೆಯೇ ಗಳಿಕೆ ಕೂಡ ಕಡಿಮೆಯಾಗಿದೆ ಎಂದು ಆರೋಪಿಸಿದರು.

ABOUT THE AUTHOR

...view details