ನವದೆಹಲಿ: ಬಿಹಾರವೂ ಕೊರೊನಾ ವೈರಸ್ನನ್ನು ಎದುರಿಸಲು ಬೇಕಾಗುವಷ್ಟು ಉಪಕರಣಗಳನ್ನು ಕೇಂದ್ರ ಸರ್ಕಾರ ಒದಗಿಸಿಲ್ಲವೆಂದು ರಾಷ್ಟ್ರೀಯ ಜನತಾದಳ(ಆರ್‌ಜೆಡಿ)ದ ರಾಜ್ಯಸಭಾ ಸಂಸದ ಮನೋಜ್ ಝಾ ಆರೋಪಿಸಿದ್ದಾರೆ.
ಕೋವಿಡ್-19 ಹೋರಾಟಕ್ಕೆ ಬಿಹಾರಕ್ಕಿಲ್ಲ ಕೇಂದ್ರದ ಸೌಲಭ್ಯ: ಸಂಸದ ಮನೋಜ್ ಝಾ - ನಿತೀಶ್ ಕುಮಾರ್
ಕೊರೊನಾ ವೈರಸ್ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರ್ಕಾರವು ಬಿಹಾರಕ್ಕೆ ಅಗತ್ಯವಾದ ಉಪಕರಣಗಳನ್ನು ಒದಗಿಸುತ್ತಿಲ್ಲ ಎಂದು ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಝಾ ಟೀಕಿಸಿದ್ದಾರೆ.
![ಕೋವಿಡ್-19 ಹೋರಾಟಕ್ಕೆ ಬಿಹಾರಕ್ಕಿಲ್ಲ ಕೇಂದ್ರದ ಸೌಲಭ್ಯ: ಸಂಸದ ಮನೋಜ್ ಝಾ ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಝಾ](https://etvbharatimages.akamaized.net/etvbharat/prod-images/768-512-6976034-835-6976034-1588074478714.jpg)
ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಝಾ
ರಾಜ್ಯಕ್ಕೆ ಪಿಪಿಇ, ವೆಂಟಿಲೇಟರ್ ಮತ್ತು ಪರೀಕ್ಷಾ ಕಿಟ್ ಸೇರಿದಂತೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಪಕ್ಷಪಾತ ಮಾಡದೇ ತಕ್ಷಣ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. "ನಿತೀಶ್ ಕುಮಾರ್ ಸರ್ಕಾರವು ಬಿಕ್ಕಟ್ಟನ್ನು ಎದುರಿಸಲು ಅಗತ್ಯವಾದ ವಸ್ತುಗಳನ್ನು ಕೇಂದ್ರದಿಂದ ಪಡೆದುಕೊಳ್ಳಲು ವಿಫಲವಾಗಿದೆ. ರಾಜ್ಯಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಒದಗಿಸಬೇಕು" ಎಂದು ಅವರು ಈಟಿವಿ ಭಾರತ್‌ಗೆ ದೂರವಾಣಿಯಲ್ಲಿ ತಿಳಿಸಿದರು.
"ಕೇಂದ್ರ ಸರ್ಕಾರ ಬಿಹಾರಕ್ಕೆ ಅನ್ಯಾಯ ಮಾಡದೇ, ಅಗತ್ಯ ವಸ್ತುಗಳನ್ನು ತಕ್ಷಣ ಒದಗಿಸಬೇಕು" ಎಂದು ಅವರು ಹೇಳಿದರು.