ಕರ್ನಾಟಕ

karnataka

ETV Bharat / bharat

ಹಳ್ಳಿಗಳು ನಮ್ಮ ಪರಂಪರೆಯ ಅಡಿಪಾಯ: ಪಂಚಾಯತ್​​ ರಾಜ್​​​​ ಶ್ಲಾಘಿಸಿದ ಶಾ - ರಾಷ್ಟ್ರೀಯ ಪಂಚಾಯತಿ ರಾಜ್ ದಿನ

ಹಳ್ಳಿಗಳ ಅಭಿವೃದ್ಧಿಯಿಂದಾಗಿಯೇ ದೇಶದ ಅಭಿವೃದ್ಧಿಯಾಗಿದೆ, ಹಳ್ಳಿಗಳು ನಮ್ಮ ಪರಂಪರೆಯ ಅಡಿಪಾಯವಾಗಿದೆ ಈ ನಿಟ್ಟಿನಲ್ಲಿ ಶ್ರಮಿಸಿದ ಎಲ್ಲರಿಗೂ ಗೃಹ ಸಚಿವ ಅಮಿತ್​ ಶಾ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Shah
ಶಾ

By

Published : Apr 24, 2020, 3:10 PM IST

ನವದೆಹಲಿ: ರಾಷ್ಟ್ರೀಯ ಪಂಚಾಯತ್​​​ ರಾಜ್ ದಿನದ ನಿಮಿತ್ತ ಗ್ರಾಮೀಣ ಭಾರತದ ಅಭಿವೃದ್ಧಿಗೆ ಶ್ರಮವಹಿಸಿದಂತವರೆಲ್ಲರಿಗೆ ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ಭಾರತವನ್ನು ನಿರ್ಮಿಸುವಲ್ಲಿ ಪಂಚಾಯತ್​​ ರಾಜ್ ಸಂಸ್ಥೆಗಳು (ಪಿಆರ್​ಐ) ಮಹತ್ವದ ಪಾತ್ರ ವಹಿಸಿವೆ. ಹಳ್ಳಿಗಳು ನಮ್ಮ ಪರಂಪರೆಯ ಅಡಿಪಾಯ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ.

ಕೇಂದ್ರ ಯೋಜನೆಗಳಾದ ಪ್ರಧಾನ್ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ, ಕಿಸಾನ್ ಸಮ್ಮಾನ್​​​ ನಿಧಿ, ಮತ್ತು ಫಸಲ್ ಭಿಮಾ ಯೋಜನೆ ಇತ್ಯಾದಿಗಳು ಗ್ರಾಮೀಣಾಭಿವೃದ್ಧಿಗೆ ಹೊಸ ನಿರ್ದೇಶನ ನೀಡಿವೆ ಎಂದು ಶಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಎನ್‌ಡಿಎ ಸರ್ಕಾರವು ರೈತರು ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಂದು ನೀತಿ ಎಂದು ಪರಿಗಣಿಸಿದೆ. ಹಳ್ಳಿ ಹಳ್ಳಿಗೂ ರಸ್ತೆಗಳು ಮತ್ತು ವಿದ್ಯುತ್, ಮನೆಗಳು, ಶೌಚಾಲಯಗಳು ಮತ್ತು ಗ್ರಾಮಸ್ಥರಿಗೆ ಅಡುಗೆ ಅನಿಲವನ್ನು ಒದಗಿಸುವ ಮೂಲಕ ಸರ್ಕಾರವು, ಅವರನ್ನು ರಾಷ್ಟ್ರದ ಪ್ರಗತಿಯ ಒಂದು ಭಾಗವಾಗಿ ಸೇರಿಸಿಕೊಂಡಿದೆ ಎಂದು ಗೃಹ ಸಚಿವರು ಹೇಳಿದರು.

ಹಳ್ಳಿಗಳು ನಮ್ಮ ಪರಂಪರೆಯ ಅಡಿಪಾಯವಾಗಿದೆ, ಅವುಗಳ ಅಭಿವೃದ್ಧಿಯಿಂದಲೇ ಭಾರತದ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಪಿಆರ್‌ಐಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details