ಹೊಸದಿಲ್ಲಿ: ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಿರುವ ಕೇಂದ್ರ ಸರ್ಕಾರ, ಈ ಔಷಧ ಮಾರಾಟದ ಮೇಲೆ ನಿಯಂತ್ರಣ ಜಾರಿ ಮಾಡಿದೆ. ಕೋವಿಡ್-10 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಔಷಧವಾಗಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಈ ಔಷಧದ ಕೊರತೆಯಾಗದಂತೆ ತಡೆಯಲು ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಈ ಕುರಿತು ಕೇಂದ್ರದ ಗೆಜೆಟ್ನಲ್ಲಿ ಅಧಿಸೂಚನೆ ಹೊಡಿಸಿದ ಕ್ಷಣದಿಂದ ಹೊಸ ನಿಯಂತ್ರಕ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.