ಕರ್ನಾಟಕ

karnataka

ETV Bharat / bharat

5ನೇ ಸಭೆಯಲ್ಲೂ ಕೇಂದ್ರ - ರೈತರ ನಡುವೆ ಮೂಡದ ಒಮ್ಮತ: ಡಿ.9ಕ್ಕೆ ಮತ್ತೊಂದು ಸುತ್ತಿನ ಮಾತುಕತೆ - ರೈತರು ಹಾಗೂ ಕೇಂದ್ರ ಸರ್ಕಾರ ಮಾತುಕತೆ

ಕೃಷಿ ಕಾಯ್ದೆಗಳ ವಿಚಾರವಾಗಿ ಒಮ್ಮತಕ್ಕೆ ಬರಲು ರೈತರು ಹಾಗೂ ಕೇಂದ್ರ ಸರ್ಕಾರದ ವಿಫಲವಾದ ಕಾರಣ ಡಿ.9 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

Centre-farmer talks remain inconclusive again
ಡಿ.9ಕ್ಕೆ ಮತ್ತೊಂದು ಸುತ್ತಿನ ಮಾತುಕತೆ

By

Published : Dec 6, 2020, 4:20 AM IST

Updated : Dec 6, 2020, 6:09 AM IST

ನವದೆಹಲಿ: ರೈತ ನಾಯಕರೊಂದಿಗೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಕೇಂದ್ರವು ಡಿಸೆಂಬರ್ 9 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಘೋಷಿಸಿದೆ.

ವಿಜ್ಞಾನ ಭವನದಲ್ಲಿ ನಡೆದ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯು ಮುಂದುವರಿಯುತ್ತದೆ ಮತ್ತು ಇದಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದಾರೆ.

"ರಾಜ್ಯಗಳಲ್ಲಿನ ಮಂಡಿಯ ಮೇಲೆ ಪರಿಣಾಮ ಬೀರುವ ಉದ್ದೇಶ ನಮಗಿಲ್ಲ, ಅವು ಕಾನೂನಿನಿಂದ ಪ್ರಭಾವಿತವಾಗುವುದಿಲ್ಲ. ಎಪಿಎಂಸಿಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಸಿದ್ಧವಾಗಿದೆ. ಎಪಿಎಂಸಿಗಳ ಬಗ್ಗೆ ಯಾರಿಗಾದರೂ ತಪ್ಪು ಕಲ್ಪನೆ ಇದ್ದರೆ, ಅದನ್ನು ಸ್ಪಷ್ಟಪಡಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ" ಎಂದಿದ್ದಾರೆ.

"ನಾವು ಕೆಲವು ಸಲಹೆಗಳನ್ನು ಪಡೆಯಲು ಬಯಸಿದ್ದೆವು ಆದರೆ ಮಾತುಕತೆಯ ಸಮಯದಲ್ಲಿ ಅದು ಆಗಲಿಲ್ಲ. ಎಲ್ಲ ಬೇಡಿಕೆಗಳನ್ನು ಸರ್ಕಾರ ಪರಿಗಣಿಸುತ್ತದೆ ಎಂದು ನಾವು ರೈತರಿಗೆ ತಿಳಿಸಿದ್ದೇವೆ. ರೈತ ಮುಖಂಡರಿಂದ ಸಲಹೆಗಳನ್ನು ಪಡೆದಿದ್ದರೆ ಪರಿಹಾರವನ್ನು ಕಂಡುಕೊಳ್ಳುವುದು ನಮಗೆ ಸುಲಭವಾಗುತ್ತಿತ್ತು. ಡಿಸೆಂಬರ್ 9 ರಂದು ಮತ್ತೊಂದು ಸಭೆ ನಡೆಯಲಿದೆ. ರೈತರಿಗೆ ತಮ್ಮ ಕುಂದುಕೊರತೆಗಳನ್ನು ಪರಿಹರಿಸುವ ಭರವಸೆ ನೀಡಿದ್ದೇವೆ. ತೀವ್ರ ಚಳಿ ಮತ್ತು ಕೋವಿಡ್ -19 ಭೀತಿಯಿಂದಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಪ್ರತಿಭಟನಾ ಸ್ಥಳಗಳಿಂದ ಮನೆಗೆ ಕಳುಹಿಸುವಂತೆ ರೈತ ಸಂಘದ ಮುಖಂಡರಿಗೆ ಮನವಿ ಮಾಡಿದ್ದೇನೆ" ಎಂದಿದ್ದಾರೆ.

Last Updated : Dec 6, 2020, 6:09 AM IST

ABOUT THE AUTHOR

...view details