ನವದೆಹಲಿ :ಕೋವಿಡ್-19 ವಿರುದ್ಧ ಭಾರತದ ಹೋರಾಟದಲ್ಲಿ ಆಯುಷ್ ಮಹತ್ವದ ಪಾತ್ರ ವಹಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೋವಿಡ್-19 ಪರಿಸ್ಥಿತಿಗೆ ಸಂಬಂಧಿಸಿದ 'ಆಯುಷ್ ಸಂಜೀವಿನಿ' ಆ್ಯಪ್ ಮತ್ತು ಆಯುಷ್ ಆಧಾರಿತ ಅಧ್ಯಯನಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಉದ್ಘಾಟಿಸಿದರು. 'ಕೊರೊನಾ ತಡೆಗಟ್ಟುವಲ್ಲಿ ಆಯುಷ್ ಪದ್ಧತಿಯ ಬಳಕೆ ಹಾಗೂ ಅದರ ಪ್ರಭಾವದ ಬಗ್ಗೆ ಡಾಟಾ ಸೃಷ್ಟಿಸಲು ಈ ಅಪ್ಲಿಕೇಶನ್ ಸಹಾಯ ಮಾಡಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಆಯುಷ್ ಈ ಆ್ಯಪ್ಗಾಗಿ ಜೊತೆಗೂಡಿದೆ' ಎಂದು ಡಾ.ಹರ್ಷವರ್ಧನ್ ಹೇಳಿದರು.