ನವದೆಹಲಿ: ಕೇಂದ್ರ ಸರ್ಕಾರವು ಏನಾದರೂ ತಪ್ಪುಗಳನ್ನು ಮಾಡಿದಾಗ ಅದನ್ನು ಮರೆಮಾಚಲು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ವಿಷಯ ತಿರುಗಿಸಲು ಮುಂದಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಭಾರತದಲ್ಲಿ ಅಶಾಂತಿ ಉಂಟುಮಾಡಲು ರೈತರ ಪ್ರತಿಭಟನೆಯ ವಿಷಯದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪತಿ ವಿದೇಶಿ ನಟರನ್ನು ಕರೆತರುತ್ತಾರೆಯೇ ಎಂದು ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯನ್ನು ಕೋರಿದ ಒಂದು ಪೋಸ್ಟ್ವೊಂದನ್ನು ವಾದ್ರಾ ಹಂಚಿಕೊಂಡಿದ್ದಾರೆ.
ನ್ಯಾಷನಲ್ ಸೈಬರ್ ಸೇಫ್ಟಿ ಅಂಡ್ ಸೆಕ್ಯುರಿಟಿ ಸ್ಟ್ಯಾಂಡರ್ಡ್ನ ಉಪಾಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ವಾದ್ರಾ, ತಮ್ಮ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ. ನನ್ನ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಈಗ ಎಲ್ಲಾ ಅಂತಾರಾಷ್ಟ್ರೀಯ ಟ್ವೀಟ್‌ಗಳಿಗೂ ನನ್ನನ್ನು ದೂಷಿಸಲಾಗುತ್ತಿದೆ. ಸೂಕ್ತವಲ್ಲದ ಕಾನೂನುಗಳನ್ನು ಪ್ರತಿಭಟಿಸುವ ರೈತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಸರ್ಕಾರವು ದೇಶದಲ್ಲಿ ತನ್ನದೇ ಆದ ತಪ್ಪುಗಳಿಂದ ಮೂಲೆ ಗುಂಪಾದಾಗ, ನಿಜವಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನನ್ನನ್ನು ಬಳಸುತ್ತಾರೆ ಎಂದಿದ್ದಾರೆ.