ನವದೆಹಲಿ :ನಿಯಮಿತ ಮಾರಾಟಗಾರರ ಮೂಲಕ ಅಥವಾ ಹೋಂ ಡೆಲಿವರಿ ಮೂಲಕ ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಗೃಹ ಇಲಾಖೆ ತಿರಸ್ಕರಿಸಿದೆ.
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದ ಸಿಎಂ ಕ್ಯಾ.ಅಮರಿಂದರ್ ಸಿಂಗ್, ಲಾಕ್ ಡೌನ್ನಿಂದಾಗಿ ಮದ್ಯ ಮಾರಾಟದಿಂದ ಮಾಸಿಕ ಬರುತ್ತಿದ್ದ 550 ಕೋಟಿ ಆದಾಯ ಕಡಿತಗೊಂಡಿದೆ. ಇದರಿಂದ ರಾಜ್ಯದ ಆರ್ಥಿಕತೆಯ ಮೇಲೆ ತೀವ್ರ ಹೊಡೆತ ಬೀಳುತ್ತದೆ. ಆದ್ದರಿಂದ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದರೆ ಸಾಮಾಜಿಕ ಅಂತರದ ಷರತ್ತನ್ನು ಪಾಲಿಸಿಕೊಂಡು ಮನೆ ಮನೆಗೆ ಮದ್ಯ ತಲುಪಿಸುವ ವ್ಯವಸ್ಥೆ ಮಾಡುದಾಗಿ ತಿಳಿಸಿದ್ದರು. ಅಮರಿಂದರ್ ಸಿಂಗ್ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಇಲಾಖೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ.