ನವದೆಹಲಿ:ಕೇಂದ್ರ ಸರ್ಕಾರದ ಪಿಂಚಣಿಯಲ್ಲಿ ಶೇಕಡಾ 20 ರಷ್ಟು ಕಡಿತವಾಗಲಿದೆ ಎಂಬ ಸುದ್ದಿ 'ಸುಳ್ಳು' ಎಂದು ನಿರಾಕರಿಸಿದ ಹಣಕಾಸು ಸಚಿವಾಲಯ, ಸಂಬಳ ಮತ್ತು ಪಿಂಚಣಿಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಭಾನುವಾರ ಟ್ವೀಟ್ ಮಾಡಿ ತಿಳಿಸಿದೆ.
ಯಾವುದೇ ಕಾರಣಕ್ಕೂ ಪಿಂಚಣಿ ಕಡಿತ ಮಾಡಲ್ಲ... ನಿವೃತ್ತ ನೌಕರರಿಗೆ ಧೈರ್ಯ ಹೇಳಿದ ಕೇಂದ್ರ ಸರ್ಕಾರ - ಕೇಂದ್ರ ಹಣಕಾಸು ಸಚಿವಾಲಯ
ಸರ್ಕಾರದ ನಗದು ನಿರ್ವಹಣೆಯಿಂದ ಸಂಬಳ ಮತ್ತು ಪಿಂಚಣಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಅದರಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಭಾನುವಾರ ಟ್ವೀಟ್ ಮಾಡಿದೆ.
ಪಿಂಚಣಿ ಕಡಿತ ವಿಚಾರವನ್ನು ನಿರಾಕರಿಸಿದ ಕೇಂದ್ರ,,, ಅಂತಹ ಯಾವುದೇ ಪ್ರಸ್ತಾಪವಿಲ್ಲ...
ಟ್ವೀಟ್ನಲ್ಲಿ, ಸರ್ಕಾರದ ನಗದು ನಿರ್ವಹಣೆಯಿಂದ ಸಂಬಳ ಮತ್ತು ಪಿಂಚಣಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇನ್ನೂ ಈ ಟ್ವೀಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಶೇರ್ ಮಾಡಿದ್ದಾರೆ.
ನಿನ್ನೆ ಸಾಮಾಜಿಕ ಮಾಧ್ಯಮ ಬಳಕೆದಾರರು ಪಿಂಚಣಿ ಕಡಿತದ ವರದಿಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದರು. ಇನ್ನೂ ಟ್ವೀಟ್‌ಗೆ ಉತ್ತರಿಸಿದ ಸೀತಾರಾಮನ್, ಸ್ಪಷ್ಟೀಕರಣ ಬಯಸಿ ಸಂಪರ್ಕಿಸಿದ್ದಕ್ಕಾಗಿ ಧನ್ಯವಾದಗಳು. ಪಿಂಚಣಿ ಕಡಿತವಿಲ್ಲ ಎಂದರು.