ಪಾಟ್ನಾ (ಬಿಹಾರ):ಚೀನಾದ ಕಂಪನಿಗಳು ಭಾಗಿಯಾಗಿರುವುದರಿಂದ ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಲಿರುವ ಮೆಗಾ ಬ್ರಿಡ್ಜ್ ಯೋಜನೆಯ ಟೆಂಡರ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಏಳು ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಮೂವರು ಅನರ್ಹರಾಗಿದ್ದಾರೆ. ಉಳಿದ ನಾಲ್ಕರಲ್ಲಿ ಇಬ್ಬರು ಚೀನೀ ಕಂಪನಿಗಳನ್ನು ಪಾಲುದಾರರನ್ನಾಗಿ ಹೊಂದಿದ್ದಾರೆ. ಆದ್ದರಿಂದ ನಾವು ಅವರ ಪಾಲುದಾರರನ್ನು ಬದಲಾಯಿಸುವಂತೆ ಕೇಳಿದ್ದೆವು. ಆದರೆ, ಅವರಿಗೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಅವರ ಟೆಂಡರನ್ನು ರದ್ದುಪಡಿಸಿದ್ದೇವೆ. ನಾವು ಮತ್ತೆ ಅರ್ಜಿ ಕರೆದಿದ್ದು, ಜುಲೈ 29ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ" ಎಂದು ಬಿಹಾರ ರಸ್ತೆ ನಿರ್ಮಾಣ ಸಚಿವ ನಂದ್ ಕಿಶೋರ್ ಯಾದವ್ ಹೇಳಿದ್ದಾರೆ.