ನವದೆಹಲಿ: ಪ್ರಾಚೀನ ರಾಮಸೇತು ಕುರಿತ ಸಂಶೋಧನಾ ಪ್ರಸ್ತಾಪಕ್ಕೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಅನುಮೋದನೆ ನೀಡಿದೆ. ಪ್ರಾಚೀನ ರಾಮಸೇತು ಉತ್ಖನನ ಕಾರ್ಯದಿಂದ ಯಾವುದೇ ಹಾನಿ ಆಗುವುದಿಲ್ಲ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಗುರುವಾರ ಹೇಳಿದ್ದಾರೆ. ಅದೇ ಸ್ಥಳದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.
'ರಾಮಸೇತು' ಸಂಶೋಧನೆಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅನುಮೋದನೆ - ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ
ಪ್ರಾಚೀನ ರಾಮಸೇತು ಕುರಿತ ಸಂಶೋಧನೆ ನಡೆಸಲು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಅನುಮೋದನೆ ನೀಡಿದೆ.
ಪುರಾತತ್ವ ಸರ್ವೇಕ್ಷಣಾ ಮಂಡಳಿಯ (ಎಎಸ್‌ಐ) ಅಧೀನದಲ್ಲಿರುವ ಆರ್ಕಿಯಾಲಜಿ ಕುರಿತ ಕೇಂದ್ರ ಸಲಹಾ ಮಂಡಳಿಯು ಕಳೆದ ತಿಂಗಳು ಗೋವಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್-ನಾಶಿಯಲ್ ಇನ್‌ಸ್ಟಿಟ್ಯೂಟ್ ಆಫ್ ಓಷನೊಗ್ರಫಿ (ಎನ್‌ಐಒ) ಈ ಪ್ರಸ್ತಾಪವನ್ನು ಅಂಗೀಕರಿಸಿತು. "ಎನ್ಐಒ ಮೂರು ಅಂಶಗಳ ಮೇಲೆ ವಿನಂತಿಯನ್ನು ಮಾಡಿದೆ - ಮೊದಲನೆಯದು ಪ್ರಕೃತಿ, ಎರಡನೆಯದು ರಾಮಸೇತು ರಚನೆ ಮತ್ತು ಮೂರನೆಯದು ಅದರ ಮೇಲೆ ಪರಿಣಾಮ ಬೀರುವ ಪ್ರದೇಶದ ಬಗ್ಗೆ. ಎಎಸ್ಐ ಅವರಿಗೆ ಅನುಮತಿ ನೀಡಿದೆ" ಎಂದು ಪಟೇಲ್ ಹೇಳಿದರು.
ಭಾರತ ಮತ್ತು ಶ್ರೀಲಂಕಾ ಮಧ್ಯೆದಲ್ಲಿರುವ ನೈಸರ್ಗಿಕವಾಗಿ ಜಲಾವೃತಗೊಂಡ ಪ್ರದೇಶದಲ್ಲಿ ರಾಮಸೇತುವಿದೆ. ಅದು ಹೇಗೆ ರೂಪುಗೊಂಡಿತು ಎಂಬುದನ್ನು ನಿರ್ಧರಿಸುವ ನೀರೊಳಗಿನ ಪರಿಶೋಧನೆ ಯೋಜನೆ ಈ ವರ್ಷ ಪ್ರಾರಂಭವಾಗಲಿದೆ.