ಕರ್ನಾಟಕ

karnataka

ETV Bharat / bharat

ಚೀನಾ ಮಹಾಗೋಡೆಯಲ್ಲ... ಭಾರತ ಕಟ್ಟಲಿದೆ 1,400 km ಉದ್ದದ ಹಸಿರು ಗೋಡೆ!? - ಗ್ರೇಟ್ ಗ್ರೀನ್ ವಾಲ್

ಆಫ್ರಿಕಾದಲ್ಲಿ ಡಾಕರ್​( ಸೆನೆಗಲ್)ದಿಂದ ಜಿಬೌಟಿ ವರೆಗೆ  ಹಾದುಹೋಗುವ “ಗ್ರೇಟ್ ಗ್ರೀನ್ ವಾಲ್” ಮಾದರಿಯಲ್ಲಿ ಈ ಗ್ರೀನ್​ ಕಾರಿಡಾರ್​​ ನಿರ್ಮಾಣ ಮಾಡುವ ಚಿಂತನೆ ಕೇಂದ್ರ ಸರ್ಕಾರದ್ದು.  ಈ ಭಾಗದಲ್ಲಿ ಮರಭೂಮಿಯ ಮರಳು ಹರಡುವಿಕೆ ತಡೆಗಟ್ಟಲು ಹಾಗೂ ಹವಾಮಾನ ವೈಪರೀತ್ಯ ತಡೆಗಟ್ಟಲು ಈ ಹಸಿರು ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇಂತಹದೆ ಯೋಜನೆ ಇನ್ನೂ ಕಲ್ಪನೆಯ ಹಂತದಲ್ಲೇ ಇದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 9, 2019, 11:40 AM IST

ನವದೆಹಲಿ: ಜಾಗತಿಕ ತಾಪಮಾನ ಏರಿಕೆ ತಡೆಗಟ್ಟಲು ಹಾಗೂ ಹಸಿರುಮನೆ ಪರಿಣಾಮವನ್ನ ತಡೆಗಟ್ಟಲು ಭಾರತ ಭಾರಿ ಪ್ಲಾನ್​ ಹಾಕಿಕೊಂಡಿದೆ. ಗುಜರಾತ್​ದಿಂದ ದೆಹಲಿ ಹರಿಯಾಣ ಗಡಿಗುಂಟ ಈ ಹಸಿರು ಗೋಡೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಚಿಂತನೆ ನಡೆಸಿದೆ.

ಭಾರತ ಕಟ್ಟಲಿದೆ 1,400 km ಉದ್ದ ಹಸಿರು ಗೋಡೆ

ಆಫ್ರಿಕಾದಲ್ಲಿ ಡಾಕರ್​( ಸೆನೆಗಲ್)ದಿಂದ ಜಿಬೌಟಿ ವರೆಗೆ ಹಾದುಹೋಗುವ “ಗ್ರೇಟ್ ಗ್ರೀನ್ ವಾಲ್” ಮಾದರಿಯಲ್ಲಿ ಈ ಗ್ರೀನ್​ ಕಾರಿಡಾರ್​​ ನಿರ್ಮಾಣ ಮಾಡುವ ಚಿಂತನೆ ಕೇಂದ್ರ ಸರ್ಕಾರದ್ದು. ಈ ಭಾಗದಲ್ಲಿ ಮರಭೂಮಿಯ ಮರಳು ಹರಡುವಿಕೆ ತಡೆಗಟ್ಟಲು ಹಾಗೂ ಹವಾಮಾನ ವೈಪರೀತ್ಯ ತಡೆಗಟ್ಟಲು ಈ ಹಸಿರು ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಈ ಉದ್ದೇಶಿತ ಗ್ರೀನ್​ ವಾಲ್​ ಸುಮಾರು 1400 ಕಿ.ಮೀ ಉದ್ದ ಹಾಗೂ ಐದು ಕಿ.ಮೀ ಅಗಲ ಇರಲಿದೆ ಎನ್ನಲಾಗಿದೆ.

ಈ ಯೋಜನೆ ಇನ್ನೂ ಕಲ್ಪನೆಯ ಹಂತದಲ್ಲೇ ಇದೆ ಎನ್ನಲಾಗಿದೆ. ಆದರೆ, ಒಂದೊಮ್ಮೆ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದೇ ಆದರೆ ಕ್ರಾಂತಿಕಾರಿ ನಿರ್ಧಾರ ವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಸಂಬಂಧ ಸಚಿವಾಲಯ ಅಧಿಕಾರಿಗಳು ಹುಮ್ಮಸ್ಸಿನಿಂದ ಈ ಯೋಜನೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಯೋಜನೆ ಬಂದರೆ ಥಾರ್​ ಮರಭೂಮಿ ಗಡಿಗುಂಟ ಉಂಟಾಗುವ ಮರಳಿನಿಂದುಂಟಾಗುವ ಹರಡುವಿಕೆಯನ್ನ ತಡೆಗಟ್ಟಬಹುದು ಎಂಬುದು ಲೆಕ್ಕಾಚಾರ

ಪೋರ್​​ಬಂದರ್ ನಿಂದ ಪಾಣಿಪತ್​ ವರೆಗೆ ಗ್ರೀನ್​ ಗೋಡೆ ನಿರ್ಮಾಣ ಮಾಡಿದರೆ ಅರಾವಳಿ ಬೆಟ್ಟಗಳ ಅತಿಕ್ರಮಣ, ಬಂಜರು ಭೂಮಿಗೆ ಮರುಜೀವ ಬರಲಿದೆ. ಗುಜರಾತ್​, ರಾಜಸ್ಥಾನ, ಹರಿಯಾಣ, ದೆಹಲಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ. ಅಷ್ಟೇ ಏಕೆ ಪಶ್ಚಿಮ ಭಾರತ ಮತ್ತು ಪಾಕಿಸ್ತಾನದ ಮರುಭೂಮಿಗಳಿಂದ ಬರುವ ಧೂಳಿಗೂ ತಡೆಗೋಡೆಯಾಗಿಯೂ ಕಾರ್ಯನಿರ್ವಹಿಸುತ್ತದೆ ಎಂಬುದು ಅಷ್ಟೇ ಸತ್ಯ.

ಈ ಕಲ್ಪನೆ ಸಾಕಾರ ಮೂಡಲು ಪ್ರೇರಣೆಯಾಗಿದ್ದು, ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಪರಿಸರ ರಕ್ಷಣೆ ಕಾನ್ಫರೆನ್ಸ್​ ಅಂತೆ. ಆದರೆ ಈ ಯೋಜನೆ ಕಾರ್ಯಗತ ಆಗುವ ಬಗ್ಗೆ ಸ್ಪಷ್ಟ ರೂಪುರೇಷೆ ಸಿದ್ದವಾಗಿಲ್ಲ. ಈ ಬಗ್ಗೆ ನಾವೆಲ್ಲ ಕಾಯುತ್ತಿದ್ದೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ABOUT THE AUTHOR

...view details