ಬಕ್ಸರ್: ಬಿಹಾರದ ಬಕ್ಸರ್ನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದನ್ನು ತಡೆಯಲು ಮುಂದಾದ ಸರ್ಕಾರಿ ಅಧಿಕಾರಿಗೆ ಆವಾಜ್ ಹಾಕಿದ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಹಾಗೂ ಅವರ 150 ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಕ್ಸರ್ ಮೂಲಕ ಹಾದು ಹೋಗುತ್ತಿದ್ದ ಸಚಿವರನ್ನು ರಾಜ್ಯ ಉಪ ವಿಭಾಗಾಧಿಕಾರಿ ಉಪಾಧ್ಯಾಯ್ ಅವರು ತಡೆದರು. ಕಾರಿನಿಂದ ಕೆಳಕ್ಕಿಳಿದ ಅಶ್ವಿನಿ ಅವರು ಸರ್ಕಾರಿ ಅಧಿಕಾರಿಗೆ ಆವಾಜ್ ಹಾಕಿ ಕೆಟ್ಟದಾಗಿ ನಡೆದುಕೊಂಡರು ಎಂದು ತಿಳಿದುಬಂದಿದೆ.