ಮುಂಬೈ: ಕೇಂದ್ರ ಸರ್ಕಾರವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಅಧಿಕಾರವನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
ಒತ್ತಡ ತಂತ್ರದಿಂದ ದೇಶಾದ್ಯಂತ ಬಿಜೆಪಿ 'ಆಪರೇಷನ್ ಕಮಲ': ಶರದ್ ಪವಾರ್ ಟೀಕೆ - NCP Sharad Pawar
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಅಧಿಕಾರ ದುರಪಯೋಗ ಮಾಡಿಕೊಳ್ಳುತ್ತಿದೆ. ಬಿಜೆಪಿ ಸೇರಲು ಸಿದ್ಧರಿಲ್ಲದ ಅನ್ಯ ಪಕ್ಷದ ನಾಯಕರ ಮೇಲೆ ಒತ್ತಡದ ತಂತ್ರ ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಇದು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲೆಡೆ ನಡೆಯುತ್ತಿದೆ ಎಂದು'ಆಪರೇಷನ್ ಕಮಲ'ದ ವಿರುದ್ಧ ಪವಾರ್ ಹರಿಹಾಯ್ದರು.
ಮುಂಬೈನಲ್ಲಿ ಮಾನಾಡಿದ ಅವರು, ಬಿಜೆಪಿ ಸೇರಲು ಸಿದ್ಧರಿಲ್ಲದ ಅನ್ಯ ಪಕ್ಷದ ನಾಯಕರ ಮೇಲೆ ಒತ್ತಡದ ತಂತ್ರ ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಇದು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಎಲ್ಲೆಡೆ ಸಂಭವಿಸುತ್ತಿದೆ ಎಂದು ಪರೋಕ್ಷವಾಗಿ 'ಆಪರೇಷನ್ ಕಮಲ'ದ ವಿರುದ್ಧ ಹರಿಹಾಯ್ದರು.
ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ಸುಮಾರು 240 ಸ್ಥಾನಗಳ ಹಂಚಿಕೆಯ ಬಗ್ಗೆ ಮಾತುಕತೆಯ ಹಂತದಲ್ಲಿದೆ. ಉಳಿದ ಸ್ಥಾನಗಳಿಗಾಗಿ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ 8-10 ದಿನಗಳಲ್ಲಿ ಎಲ್ಲ ಕ್ಷೇತ್ರಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.