ಕರ್ನಾಟಕ

karnataka

ETV Bharat / bharat

LIVE: ಆದಾಯ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಕೇಂದ್ರ - ಬಜೆಟ್​​ ಮಂಡನೆಯ ಅಂಕಿ ಅಂಶಗಳು

central budget
ಕೇಂದ್ರ ಬಜೆಟ್ ಮಾಹಿತಿ

By

Published : Feb 1, 2021, 9:13 AM IST

Updated : Feb 1, 2021, 5:30 PM IST

13:45 February 01

ಕೃಷಿ ಸೆಸ್​.. ಯಾವುದರ ಮೇಲೆ ಎಷ್ಟು..?

  • ಚಿನ್ನ, ಬೆಳ್ಳಿ, ಚಿನ್ನದ ಗಟ್ಟಿಗಳ ಮೇಲೆ ಶೇ.2.5ರಷ್ಟು ಕೃಷಿ ಸೆಸ್​
  • ಮದ್ಯದ ಮೇಲೆ ಶೇಕಡಾ ನೂರರಷ್ಟು ಕೃಷಿ ಸೆಸ್​
  • ಕಚ್ಚಾ ಪಾಮ್ ಆಯಿಲ್ ಮೇಲೆ 17.5ರಷ್ಟು  ಕೃಷಿ ಸೆಸ್​
  • ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲೆ ಶೇ.20ರಷ್ಟು ಸೆಸ್​
  • ಸೇಬು ಹಣ್ಣಿನ ಮೇಲೆ ಶೇಕಡಾ 35ರಷ್ಟು ಸೆಸ್​
  • ಕಲ್ಲಿದ್ದಲು, ಲಿಗ್ನೈಟ್​, ಪೀಟ್​ ಮೇಲೆ ಶೇ.1.5ರಷ್ಟು ಕೃಷಿ ಸೆಸ್​
  • ಕೆಲವು ರಸಗೊಬ್ಬರಗಳ ಮೇಲೆ ಶೇಕಡಾ 5ರಷ್ಟು ಕೃಷಿ ಸೆಸ್​
  • ಬಟಾಣಿ, ಕಾಬೂಲ್ ಕಡಲೆ ಮೇಲೆ ಕ್ರಮವಾಗಿ ಶೇ.40 ಮತ್ತು ಶೇ 30ರಷ್ಟು ಸೆಸ್​​

13:30 February 01

ಪೆಟ್ರೋಲ್​, ಡಿಸೇಲ್​ ಬೆಲೆ ಏರಿಕೆ

  • ಪೆಟ್ರೋಲ್​, ಡಿಸೇಲ್​ ಮೇಲೆ ಕೃಷಿ ಸೆಸ್​​
  • ಪೆಟ್ರೋಲ್​, ಡಿಸೇಲ್​ ಮೇಲೆ ಶೇ.5ರಷ್ಟು ಕೃಷಿ ಸೆಸ್​​
  • ಲೀಟರ್ ಪೆಟ್ರೋಲ್​ 2.30 ರೂಪಾಯಿ ಏರಿಕೆ
  • ಡಿಸೇಲ್​ ಬೆಲೆ ಲೀಟರ್​ಗೆ ನಾಲ್ಕು ರೂಪಾಯಿ ಏರಿಕೆ
  • ಮದ್ಯದ ಮೇಲೆ ಶೇಕಡಾ ನೂರರಷ್ಟು ಕೃಷಿ ಸೆಸ್​​

13:16 February 01

ತೆರಿಗೆ ದರ ಎಷ್ಟೆಷ್ಟು?

  • ಎರಡೂವರೆ ಲಕ್ಷಕ್ಕಿಂತ ಕಡಿಮೆ ಆದಾಯಕ್ಕೆ ಶೂನ್ಯ ತೆರಿಗೆ
  • ಎರಡೂವರೆ ಲಕ್ಷದಿಂದ 5 ಲಕ್ಷ ರೂಪಾಯಿಗೆ ಶೇ.5ರಷ್ಟು ತೆರಿಗೆ
  • ಐದು ಲಕ್ಷದಿಂದ 7.5 ಲಕ್ಷದವರೆಗೆ ಶೇ.10ರಷ್ಟು ತೆರಿಗೆ
  • 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.15ರಷ್ಟು ತೆರಿಗೆ
  • ಹತ್ತು ಲಕ್ಷದಿಂದ 12.5 ಲಕ್ಷದವರೆಗೆ ಶೇ.20ರಷ್ಟು ತೆರಿಗೆ
  • 12 ಲಕ್ಷದಿಂದ 15 ಲಕ್ಷ ಮೇಲ್ಪಟ್ಟು ಶೇ.25ರಷ್ಟು ತೆರಿಗೆ
  • 15 ಲಕ್ಷ ಮೇಲ್ಪಟ್ಟು ಶೇ.30ರಷ್ಟು ತೆರಿಗೆ

13:00 February 01

ಆದಾಯ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಕೇಂದ್ರ

  • ಆದಾಯ ತೆರಿಗೆಯಲ್ಲಿ ಯಥಾಸ್ಥಿತಿ ಕಾಯ್ದಕೊಂಡ ಕೇಂದ್ರ
  • ಈ ಬಾರಿಯ ತೆರಿಗೆಯಲ್ಲಿ ಬದಲಾವಣೆ ಬಜೆಟ್​ನಲ್ಲಿ ಯಥಾಸ್ಥಿತಿ
  • 1 ಗಂಟೆ 50 ನಿಮಿಷ ಬಜೆಟ್​​ ಮಂಡಿಸಿದ ನಿರ್ಮಲಾ ಸೀತಾರಾಮನ್​​

12:53 February 01

400 ಹಳೆ ಕಸ್ಟಂ ವಿನಾಯಿತಿಗಳ ಪರಿಷ್ಕರಣೆ

  • ಈ ವರ್ಷದಲ್ಲಿ  400 ಹಳೆ ಕಸ್ಟಂ ವಿನಾಯಿತಿಗಳ ಪರಿಷ್ಕರಣೆ
  • ಅಕ್ಟೋಬರ್ 2021ರಿಂದ ಹೊಸ ನೀತಿಗಳ ಜಾರಿಗೆ
  • ಕೇಂದ್ರ ಸರ್ಕಾರದಿಂದ ಈ ವರ್ಷ 80 ಸಾವಿರ ಕೋಟಿ ಸಾಲ

12:49 February 01

ಸ್ಟಾರ್ಟ್​ ಅಪ್​ಗಳಿಗೆ 'ತೆರಿಗೆ ರಜೆ'

  • ಸ್ಟಾರ್ಟ್​ ಅಪ್​ಗಳಿಗೆ ತೆರಿಗೆ ರಜೆ ಒಂದು ವರ್ಷ ಮುಂದೂಡಿಕೆ
  • ಐಎಫ್​​ಎಸ್​ಸಿ ನಿಧಿಯ ಮೇಲೆ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ

12:45 February 01

ಡಿಸೆಂಬರ್​ನಲ್ಲಿ ಮಾನವರಹಿತ ಗಗನಯಾನ ಯೋಜನೆ

  • ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೂ ಬಜೆಟ್​ನಲ್ಲಿ ಕೊಡುಗೆ
  • ನಾಲ್ವರು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ
  • ಡಿಸೆಂಬರ್​ನಲ್ಲಿ ಮಾನವರಹಿತ ಗಗನಯಾನ ಯೋಜನೆ

12:40 February 01

ಅಗ್ಗದ ಗೃಹಸಾಲ ಮುಂದುವರಿಕೆ

  • ಮನೆ ನಿರ್ಮಾಣದ ಕನಸುಳ್ಳವರಿಗೆ ಗಿಫ್ಟ್​
  • ಅಗ್ಗದ ಗೃಹಸಾಲ ಮುಂದುವರೆಸಲು ಕೇಂದ್ರ ಚಿಂತನೆ

12:37 February 01

3,726 ಕೋಟಿ ರೂಪಾಯಿ

  • ಮುಂಬರುವ  ಜನಗಣತಿಗೆ 3,726 ಕೋಟಿ ರೂಪಾಯಿ
  • ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಡಿಜಿಟಲ್ ಸೆನ್ಸಸ್​

12:31 February 01

6.48 ಕೋಟಿ ಮಂದಿಯಿಂದ ಆದಾಯ ತೆರಿಗೆ ಪಾವತಿ

  • 6.48 ಕೋಟಿ ಮಂದಿಯಿಂದ ಆದಾಯ ತೆರಿಗೆ ಪಾವತಿ
  • ಹಿರಿಯ ನಾಗರಿಕರು ಆದಾಯ ತೆರಿಗೆ ಕಟ್ಟುವಂತಿಲ್ಲ
  • 75 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ
  • ನೇರ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿರುವ ಕೇಂದ್ರ
  • 5 ಕೋಟಿ ವಹಿವಾಟಿನ ಟ್ರಸ್ಟ್​ಗಳಿಗೆ ತೆರಿಗೆ ವಿನಾಯಿತಿ

12:29 February 01

ಶೇಕಡಾ 9.5ರಷ್ಟು ವಿತ್ತೀಯ ಕೊರತೆ

  • 2020-21ರ ಹಣಕಾಸು ವರ್ಷದಲ್ಲಿ ಶೇಕಡಾ 9.5ರಷ್ಟು ವಿತ್ತೀಯ ಕೊರತೆ
  • 34.50 ಲಕ್ಷ ಕೋಟಿಗೆ ಏರಿದ  ಆಯವ್ಯಯ ವೆಚ್ಚ
  • ಬಜೆಟ್ ವೆಚ್ಚ 4.39 ಲಕ್ಷ ಕೋಟಿ
  • ಬಜೆಟ್ ಅಂದಾಜು ವೆಚ್ಚ 4.12 ಲಕ್ಷ ಕೋಟಿ

12:26 February 01

ಆಳ ಸಮುದ್ರ ಯೋಜನೆ

  • ಆಳ ಸಮುದ್ರ ಯೋಜನೆ ಜಾರಿಗೊಳಿಸಿದ ಕೇಂದ್ರ
  • 4 ಸಾವಿರ ಕೋಟಿ ಅನುದಾನದಲ್ಲಿ  ಯೋಜನೆ ಜಾರಿ
  • ನಾಲ್ಕು ವರ್ಷದಲ್ಲಿ  ಈ ಯೋಜನೆ ಜಾರಿಗೊಳಿಸಲು ಸಿದ್ಧತೆ

12:24 February 01

ಗೋವಾ ವಿಮೋಚನಾ ದಿನಾಚರಣೆ

  • ಕೇಂದ್ರ ಸರ್ಕಾರದಿಂದ ಗೋವಾ ವಿಮೋಚನಾ ದಿನಾಚರಣೆ
  • ಗೋವಾ ವಿಮೋಚನಾ ವರ್ಷಾಚರಣೆಗೆ 300 ಕೋಟಿ

12:22 February 01

ಸಂಶೋಧನೆಗೆ 50 ಸಾವಿರ ಕೋಟಿ

  • ಸಂಶೋಧನಾ ವಲಯಕ್ಕೆ ಕೇಂದ್ರದಿಂದ ಅನುದಾನ
  • 50 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟ ಕೇಂದ್ರ
  • ಆನ್​ಲೈನ್ ವಹಿವಾಟಿಗೆ 1500 ಕೋಟಿ ಮೀಸಲು

12:20 February 01

ಲೇಹ್​​ನಲ್ಲಿ ಸೆಂಟ್ರಲ್ ವಿವಿ

  • ಲೇಹ್​​ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ
  • ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿ ಜಾರಿಗೆ
  • ಎನ್​ಜಿಒ ಜತೆಗೂಡಿ ನೂರು ಸೈನಿಕ್ ಶಾಲೆ

12:19 February 01

ಕೌಶಲ್ಯಾಭಿವೃದ್ದಿಗೆ 3 ಸಾವಿರ ಕೋಟಿ

  • ಯುವಕರ ಕೌಶಲ್ಯಾಭಿವೃದ್ದಿಗೆ 3 ಸಾವಿರ ಕೋಟಿ
  • ದೇಶದಲ್ಲಿ 750 ಏಕಲವ್ಯ ಮಾದರಿ ಶಾಲೆಗಳ ಆರಂಭ
  • ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳು
  • ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
  • ಪರಿಶಿಷ್ಠ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್​

12:09 February 01

'ಒಂದು ದೇಶ, ಒಂದು ಪಡಿತರ ಚೀಟಿ '

  • ರೈತರಿಗೆ 16.5 ಲಕ್ಷ ಕೋಟಿ ರೂಪಾಯಿ ಸಾಲ ನೀಡಲು ಗುರಿ
  • ಒಂದು ದೇಶ, ಒಂದು ಪಡಿತರ ಚೀಟಿ ಈಗಾಗಲೇ ಜಾರಿ
  • ಈ ಯೋಜನೆಯಡಿ 69 ಕೋಟಿ ಮಂದಿಗೆ ಸಹಾಯ
  • ದೇಶದ ಶೇಕಡಾ 86ರಷ್ಟು ಭಾಗ ಈ ಯೋಜನೆಯಡಿಗೆ
  • ಮತ್ತಷ್ಟು ರಾಜ್ಯಗಳಿಗೆ ಈ ಯೋಜನೆ ವಿಸ್ತರಣೆ
  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ
  • ಎಪಿಎಂಸಿಗಳ ಸಬಲೀಕರಣಕ್ಕೆ  ಕೇಂದ್ರದ ಯೋಜನೆ ಜಾರಿ

12:04 February 01

ಎಲ್ಲಾ ರಾಜ್ಯಗಳಿಗೆ ಸ್ವಾಮಿತ್ವ ಯೋಜನೆ ವಿಸ್ತರಣೆ

  • ಎಲ್ಲಾ ರಾಜ್ಯಗಳಿಗೆ ಸ್ವಾಮಿತ್ವ ಯೋಜನೆ ವಿಸ್ತರಣೆ
  • ಈ ಮೊದಲು ಕೆಲವೇ ರಾಜ್ಯಗಳಿಗೆ ಮೀಸಲಾಗಿದ್ದ ಸ್ವಾಮಿತ್ವ
  • ಗ್ರಾಮೀಣ ಮಂದಿಗೆ ಸಿಗಲಿದೆ ಆಸ್ತಿ ಮೇಲಿನ ಹಕ್ಕು

12:02 February 01

ಕೃಷಿಕರ ಆದಾಯ ದ್ವಿಗುಣಗೊಳಿಸಲು ಯೋಜನೆ

  • ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರಿಗೆ ಯೋಜನೆ
  • ಕೃಷಿಕರ ಆದಾಯ ದ್ವಿಗುಣಗೊಳಿಸಲು ಕೇಂದ್ರದ ಯೋಜನೆ
  • ಕೇಂದ್ರ ಸರ್ಕಾರದಿಂದಲೇ ಗೋಧಿ ಖರೀದಿಗೆ ಯೋಜನೆ
  • ಭತ್ತ ಬೆಳೆಗಾರರಿಗೆ 1 ಲಕ್ಷ 72 ಸಾವಿರ ಕೋಟಿ ಅನುದಾನ
  • ಧಾನ್ಯಗಳ ಖರೀದಿಗೆ ಹತ್ತೂವರೆ ಸಾವಿರ ಕೋಟಿ ಮೀಸಲು

11:59 February 01

2013ರ ಕಂಪನಿಗೆ ಕಾಯ್ದೆ ಬಗ್ಗೆ ಮರು ವ್ಯಾಖ್ಯಾನ

  • 2013ರ ಕಂಪನಿಗೆ ಕಾಯ್ದೆ ಬಗ್ಗೆ ಮರು ವ್ಯಾಖ್ಯಾನ
  • ಸಣ್ಣ ಉದ್ಯಮಗಳಿಗಳ ವಹಿವಾಟು ಮಿತಿ ಮರುನಿಗದಿ
  • ಎಂಎಸ್​ಎಂಇಗೆ 15,700 ಕೋಟಿ ರೂಪಾಯಿ ಅನುದಾನ

11:55 February 01

ಬ್ಯಾಂಕ್​ ಠೇವಣಿದಾರರ ವಿಮೆಗೆ ಮೊತ್ತ ಏರಿಕೆ

  • ಬ್ಯಾಂಕ್​ಗಳಿಗೆ  20 ಸಾವಿರ ಕೋಟಿ ಬಂಡವಾಳ
  • ಕೇಂದ್ರದಿಂದ ಬಂಡವಾಳ ಮರು ಪೂರೈಕೆಗೆ ಅನುದಾನ
  • ಬ್ಯಾಂಕ್​ ಠೇವಣಿದಾರರ ವಿಮೆಗೆ ಮೊತ್ತ ಏರಿಕೆ

11:52 February 01

ನವೀಕರಿಸಬಹುದಾದ ಇಂಧನಕ್ಕೆ 1.5ಸಾವಿರ ಕೋಟಿ

  • ಪಿಎಸ್​​ಯುಗಳ ಸಬಲೀಕರಣಕ್ಕೆ ಬಜೆಟ್​ನಲ್ಲಿ ಆದ್ಯತೆ
  • ನವೀಕರಿಸಬಹುದಾದ ಇಂಧನಕ್ಕೆ 1.5ಸಾವಿರ ಕೋಟಿ
  • ವಿಮಾ ಕಂಪನಿಗಳಲ್ಲಿ ಎಫ್​ಡಿಐ ಶೇ.74ರಷ್ಟು ಹೆಚ್ಚಳ
  • ಈ ಮೊದಲು ಶೇಕಡಾ 49ರಷ್ಟಿದ್ದ ಎಫ್​ಡಿಐ
  • ಪೆಟ್ರೋಲಿಯಂ, ಗ್ಯಾಸ್ ಸರಬರಾಜು ಯೋಜನೆಗೆ ಆದ್ಯತೆ

11:51 February 01

ಚೆನ್ನೈ ಮೆಟ್ರೋಗೆ 63,246 ಕೋಟಿ ರೂಪಾಯಿ

  • ಕೊಚ್ಚಿ ಮೆಟ್ರೋಗೆ  1957  ಕೋಟಿ ರೂಪಾಯಿ
  • ಎರಡನೇ ಹಂತದ ಕೊಚ್ಚಿ ಮೆಟ್ರೋಗೆ ಅನುದಾನ
  • 11.5 ಕಿಲೋ ಉದ್ದದ ಕೊಚ್ಚಿ ಮೆಟ್ರೋ
  • ಚೆನ್ನೈ ಮೆಟ್ರೋಗೆ   63,246  ಕೋಟಿ ರೂಪಾಯಿ
  • 118.9 ಕಿಲೋಮೀಟರ್ ಉದ್ದದ ಚೆನ್ನೈ ಮೆಟ್ರೋ

11:46 February 01

ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್​

  • ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್​ಗೆ ಚಾಲನೆ
  • ನೂರು ನಗರಗಳಲ್ಲಿ ಅನಿಲ ಪೂರೈಕೆ ಕೇಂದ್ರಗಳ ಸ್ಥಾಪನೆ
  • ಸೌರಶಕ್ತಿ ವಲಯಕ್ಕೆ 1 ಸಾವಿರ ಕೋಟಿ ರೂಪಾಯಿ ಅನುದಾನ

11:45 February 01

ವಿದ್ಯುತ್ ಸಂಪರ್ಕಕ್ಕೆ ಯೋಜನೆ

  • 2.8 ಕೋಟಿ ಮನೆಗಳಿಗೆ ಆರು ವರ್ಷಗಳಲ್ಲಿ ವಿದ್ಯುತ್ ಸಂಪರ್ಕ
  • ವಿದ್ಯುತ್ ಸಂಪರ್ಕ ಕಲ್ಪಿಸಲು 7 ಯೋಜನೆಗಳು ಜಾರಿ
  • ಯೋಜನೆಗಳಿಗಾಗಿ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು  ಅನುದಾನ

11:42 February 01

ಬ್ರಾಡ್ ಗೇಜ್ ರೈಲ್ವೆ ಶೇ.100ರಷ್ಟು ವಿದ್ಯುದ್ದೀಕರಣ

  • ಬ್ರಾಡ್ ಗೇಜ್ ರೈಲ್ವೆ ಶೇ.100ರಷ್ಟು ವಿದ್ಯುದ್ದೀಕರಣ
  • 2023ರ ಡಿಸೆಂಬರ್ ನೊಳಗೆ ವಿದ್ಯುದ್ದೀಕರಣ ಮಾಡಲು ಯೋಜನೆ
  • ಪಿಪಿಪಿ ಮೂಲಕ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲು ಒತ್ತು

11:38 February 01

ಬೆಂಗಳೂರು 2ನೇ ಹಂತದ ಮೆಟ್ರೋಗೆ ಅನುದಾನ

  • ಬೆಂಗಳೂರು 2ನೇ ಹಂತದ ಮೆಟ್ರೋಗೆ ಅನುದಾನ
  • 14788 ಕೋಟಿ ರೂಪಾಯಿ ಅನುದಾನ
  • 58.19  ಕಿಲೋಮೀಟರ್ ಉದ್ಧದ ಮೆಟ್ರೋ ರೈಲ್ವೆ ಮಾರ್ಗ
  • ಮೆಟ್ರೋನ 2a ಮತ್ತು 2b ಹಂತಕ್ಕೆ ಅನುದಾನ

11:36 February 01

ಸಾರ್ವಜನಿಕ ಆರೋಗ್ಯ ಲ್ಯಾಬ್​ಗಳ ನಿರ್ಮಾಣ

  • ಸಾರ್ವಜನಿಕ ಆರೋಗ್ಯ  ಲ್ಯಾಬ್​ಗಳ ನಿರ್ಮಾಣ
  • 11 ರಾಜ್ಯಗಳ 3,382ರಲ್ಲಿ  ಲ್ಯಾಬ್​ಗಳ ನಿರ್ಮಾಣ
  • 20 ಮಹಾನಗರಗಳಲ್ಲಿ  ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ
  • 32 ವಿಮಾನ ನಿಲ್ದಾಣಗಳಲ್ಲಿ, 11 ಸೀ ಪೋರ್ಟ್​ಗಳಲ್ಲಿ ಆರೋಗ್ಯ ಕೇಂದ್ರ
  • 50 ತುರ್ತು ಆಪರೇಷನ್ ಕೇಂದ್ರ, 2 ಮೊಬೈಲ್ ಆಸ್ಪತ್ರೆ ಸ್ಥಾಪನೆ
  • ಬಜೆಟ್​ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

11:31 February 01

11 ಸಾವಿರ ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಯೋಜನೆ

  • ತಮಿಳುನಾಡಿಗೆ ಮಧುರೈ-ಕೊಲ್ಲಂ ಕಾರಿಡಾರ್​ಗೆ ಅನುದಾನ ಬಿಡುಗಡೆ
  • ಕೇರಳದಲ್ಲಿಯೂ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ
  • ಕೇರಳದಲ್ಲಿ 1,100 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ
  • ಮುಂದಿನ ವರ್ಷದಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ
  • 11 ಸಾವಿರ ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಯೋಜನೆ

11:29 February 01

ನೂತನ ಸ್ಕ್ರ್ಯಾಪ್ ನೀತಿ

  • ನೂತನ ಸ್ಕ್ರ್ಯಾಪ್  ನೀತಿ ಘೋಷಣೆ ಮಾಡಿದ ಹಣಕಾಸು ಸಚಿವೆ
  • ಸ್ಕ್ರ್ಯಾಪಿಂಗ್ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ ನಿರ್ಮಲಾ ಸೀತಾರಾಮನ್​
  • ವೈಯಕ್ತಿಕ ವಾಹನಗಳಿಗೆ 20 ವರ್ಷ ಬಳಕೆಯ ಮಿತಿ
  • ವಾಣಿಜ್ಯ ವಾಹನಗಳಿಗೆ 15 ವರ್ಷ ಬಳಕೆಯ ಮಿತಿ

11:27 February 01

ಹೊಸ ಹೆಲ್ತ್​ ಇನ್ಫ್ರಾ ಯೋಜನೆ

  • ಹೊಸ ಹೆಲ್ತ್​ ಇನ್ಫ್ರಾ ಯೋಜನೆ ಘೋಷಿಸಿದ ಹಣಕಾಸು ಸಚಿವೆ
  • ಈ ಯೋಜನೆಗೆ 61 ಸಾವಿರ ಕೋಟಿ ಅನುದಾನ ಬಿಡುಗಡೆ

11:23 February 01

ನಗರದ ಜಲಜೀವನ ಮಿಷನ್ ಯೋಜನೆ ಜಾರಿ

  • ನಗರದ ಜಲಜೀವನ ಮಿಷನ್ ಯೋಜನೆ ಜಾರಿ
  • ಸ್ವಚ್ಛ ಭಾರತ ಅಡಿಯಲ್ಲಿ ಪ್ಲಾಸ್ಟಿಕ್ ನಿಯಂತ್ರಿಸಲು ಒತ್ತು
  • 7 ಜವಳಿ ಪಾರ್ಕ್​​ಗಳ ನಿರ್ಮಾಣಕ್ಕೆ  ಯೋಜನೆ
  • 9 ಬಯೋ ಸೇಫ್ಟಿ ಲ್ಯಾಬ್​ಗಳ ಸ್ಥಾಪನೆ ಒತ್ತು

11:21 February 01

ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ

  • ಆರೋಗ್ಯ ಕ್ಷೇತ್ರಕ್ಕೆ ಬಜೆಟ್​ನಲ್ಲಿ 64,180 ಕೋಟಿ
  • ಮುಂದಿನ ಆರು ವರ್ಷಗಳಲ್ಲಿ 64,180 ಕೋಟಿ ವೆಚ್ಚ
  • ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಘೋಷಣೆ
  • ಆರೋಗ್ಯ ಕ್ಷೇತ್ರಕ್ಕೆ ಶೇಕಡಾ 137ರಷ್ಟು ಹೆಚ್ಚು ಅನುದಾನ
  • ನಗರ ಸ್ವಚ್ಛ ಭಾರತಕ್ಕೆ 1.41 ಲಕ್ಷ ಕೋಟಿ ರೂಪಾಯಿ ಅನುದಾನ

11:17 February 01

ಮಿನಿ ಬಜೆಟ್​ಗಳ ರೀತಿ ಘೋಷಣೆ

  • ಆರ್ಥಿಕ ಚೇತರಿಕೆಗೆ ದೇಶ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ
  • ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿ ಮಾಡಿದೆ
  • ಮೂರು ಆತ್ಮ ನಿರ್ಭರ ಯೋಜನೆಗಳನ್ನು ಕೇಂದ್ರ  ಘೋಷಿಸಿದೆ
  • ಈ ಘೋಷಣೆಗಳು ಮಿನಿ ಬಜೆಟ್​ಗಳ ರೀತಿ ಇದ್ದವು
  • ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿಕೆ

11:14 February 01

'ನೂರಕ್ಕೂ ಹೆಚ್ಚು ದೇಶಗಳನ್ನು ರಕ್ಷಿಸಲು ದೇಶ ಮುಂದಾಗಿದೆ'

  • ಇಂದು ಭಾರತವು 2 ಕೊರೊನಾ ಲಸಿಕೆಗಳನ್ನು ಹೊಂದಿದೆ
  • ದೇಶ ಮಾತ್ರವಲ್ಲದೇ ನೂರಕ್ಕೂ ಹೆಚ್ಚು ದೇಶಗಳನ್ನು ರಕ್ಷಿಸಲು ಮುಂದಾಗಿದೆ
  • ಇನ್ನೂ ಕೆಲವು ಲಸಿಕೆಗಳನ್ನು  ಶೀಘ್ರದಲ್ಲೇ ನಿರೀಕ್ಷಿಸಬಹುದು
  • ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಭರವಸೆ

11:12 February 01

ಭಾರತ ಆರ್ಥಿಕ ಚೇತರಿಕೆಗೆ ಸಂಪೂರ್ಣ ಸಿದ್ಧವಾಗಿದೆ

  • 2021ನೇ ವರ್ಷ ದೇಶದಲ್ಲಿ ಅತಿ ದೊಡ್ಡ ಮೈಲಿಗಲ್ಲಿನ ವರ್ಷ
  • ಕೊರೊನಾ ವಿರುದ್ಧ ಹೋರಾಡಿದ ವಾರಿಯರ್ಸ್​ಗೆ ಧನ್ಯವಾದ
  • ಭಾರತ ಆರ್ಥಿಕ ಚೇತರಿಕೆಗೆ ಸಂಪೂರ್ಣ ಸಿದ್ಧವಾಗಿದೆ
  • ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಭರವಸೆ

11:08 February 01

ಜಗತ್ತು ಆರ್ಥಿಕವಾಗಿ ಕುಸಿಯುತ್ತಿದೆ

  • ಬಜೆಟ್​ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್​
  • ಕೊರೊನಾದಿಂದಾಗಿ ಜಗತ್ತು ಆರ್ಥಿಕವಾಗಿ ಕುಸಿಯುತ್ತಿದೆ
  • ಕೊರೊನಾ ವೇಳೆ ಬಜೆಟ್​ ಮಂಡನೆಗೆ ತಯಾರಿ ನಡೆಯುತ್ತಿದೆ
  • ಎಂದೂ ಇಲ್ಲದ ಕಷ್ಟದ ಪರಿಸ್ಥಿತಿಯಲ್ಲಿ ಬಜೆಟ್​ ಮಂಡಿಸುತ್ತಿದ್ದೇವೆ
  • ಈಗಾಗಲೇ ದೇಶದಲ್ಲಿ ಆತ್ಮ ನಿರ್ಭರ ಯೋಜನೆ ಘೋಷಿಸಲಾಗಿದೆ
  • ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ಹೇಳಿಕೆ

11:02 February 01

ಕೇಂದ್ರ ಬಜೆಟ್​ ಮಂಡನೆ ವೇಳೆ ಗದ್ದಲ

  • ಕೇಂದ್ರ ಬಜೆಟ್​ ಮಂಡನೆ ವೇಳೆ ಗದ್ದಲ
  • ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್​ ಮಂಡನೆ
  • ಬಜೆಟ್​ ಮಂಡನೆ ವೇಳೆ ವಿಪಕ್ಷಗಳಿಂದ ಘೋಷಣೆ

11:00 February 01

ಬಜೆಟ್ 'ಹೀಗಿರಲಿ': ರಾಹುಲ್ ಗಾಂಧಿ ಟ್ವೀಟ್​​

  • ಬಜೆಟ್​ ಬಗ್ಗೆ  ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಟ್ವೀಟ್
  • ಬಜೆಟ್​ 'ಹೀಗಿರಬೇಕು' ಎಂದು ಟ್ವೀಟ್ ಮಾಡಿರುವ ರಾಹುಲ್​
  • ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಬೆಂಬಲಿಸಬೇಕು
  • ಉದ್ಯೋಗ ಸೃಷ್ಟಿಗೆ ರೈತರು ಮತ್ತು  ಕೈಗಾರಿಕೆಗಳನ್ನು ಬೆಂಬಲಿಸಬೇಕು
  • ಆರೋಗ್ಯ ಕ್ಷೇತ್ರಕ್ಕೆ ಮಾಡುವ ವೆಚ್ಚವನ್ನು  ಹೆಚ್ಚಿಸಬೇಕು
  • ಗಡಿ ಭದ್ರತೆಗೆ ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕೆಂದು ರಾಹುಲ್​ ಟ್ವೀಟ್​

10:54 February 01

ಬಜೆಟ್​ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

  • ಬಜೆಟ್​ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
  • ಮೋದಿ ನೇತೃತ್ವದ ಸಭೆಯಲ್ಲಿ ಬಜೆಟ್​ಗೆ ಒಪ್ಪಿಗೆ

10:36 February 01

ಸಂಸತ್​ಗೆ ಆಗಮಿಸಿದ ಲೋಕಸಭಾ ಸ್ಪೀಕರ್

ಸಂಸತ್​ಗೆ ಆಗಮಿಸಿದ ಲೋಕಸಭಾ ಸ್ಪೀಕರ್
  • ಸಂಸತ್ ಭವನಕ್ಕೆ ಆಗಮಿಸಿದ ಲೋಕಸಭಾ ಸ್ಪೀಕರ್
  • ಬಜೆಟ್​ ಮಂಡನೆ ಹಿನ್ನೆಲೆ ಆಗಮಿಸಿದ ಓಂ ಬಿರ್ಲಾ

10:21 February 01

ಕ್ಯಾಬಿನೆಟ್ ಸಭೆ ಆರಂಭ

  • ಕೇಂದ್ರ ಸಚಿವ ಸಂಪುಟ ಸಭೆ ಆರಂಭ
  • ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಆರಂಭ
  • ಬಜೆಟ್​ಗೆ ಒಪ್ಪಿಗೆ ನೀಡಲಿರುವ ಪ್ರಧಾನಿ ಮೋದಿ
  • ಸಂಸತ್​ ಭವನದಲ್ಲಿ ಆರಂಭವಾಗಿರುವ ಸಭೆ

10:16 February 01

ಸಂಸತ್​ಗೆ ಆಗಮಿಸಿದ ಪ್ರಧಾನಿ

  • ಬಜೆಟ್ ಹಿನ್ನೆಲೆ ಸಂಸತ್​ಗೆ ಆಗಮಿಸಿದ ಪ್ರಧಾನಿ
  • ಕ್ಯಾಬಿನೆಟ್​ ಸಭೆಯಲ್ಲಿ ಬಜೆಟ್​ಗೆ ಒಪ್ಪಿಗೆ ನೀಡಲಿರುವ ಮೋದಿ
  • ಕೆಲವೇ ಕ್ಷಣಗಳಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆ

10:08 February 01

ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಂಪುಟ ಸಭೆ

  • ಕೆಲವೇ ಕ್ಷಣಗಳಲ್ಲಿ ಕೇಂದ್ರ ಸಂಪುಟ ಸಭೆ ಆರಂಭ
  • ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಭೆ
  • ಕ್ಯಾಬಿನೆಟ್ ಒಪ್ಪಿಗೆ ಪಡೆದ ನಂತರ ಬಜೆಟ್ ಮಂಡನೆ

10:05 February 01

ಸಂಸತ್ತಿಗೆ ಆಗಮಿಸಿದ ಹಣಕಾಸು ಸಚಿವೆ

  • ಸಂಸತ್ತಿಗೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
  • ನಿರ್ಮಲಾ ಸೀತಾರಾಮನ್​ಗೆ ಹಣಕಾಸು ಖಾತೆ ರಾಜ್ಯ ಸಚಿವರು ಸಾಥ್
  • ಬಜೆಟ್​ ಟ್ಯಾಬ್​ನೊಂದಿಗೆ ಆಗಮಿಸಿದ ಕೇಂದ್ರ ಹಣಕಾಸು ಸಚಿವರು

09:46 February 01

ರಾಷ್ಟ್ರಪತಿ ಭೇಟಿಯಾದ ನಿರ್ಮಲಾ ಸೀತಾರಾಮನ್​

  • ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್​​ ಭೇಟಿ
  • ರಾಷ್ಟ್ರಪತಿ ಭೇಟಿಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​
  • ರಾಷ್ಟ್ರಪತಿ ಅಂಕಿತದ ಬಳಿಕ ನಿರ್ಮಲಾ ಸೀತಾರಾಮನ್​ರಿಂದ ಬಜೆಟ್​ ಮಂಡನೆ
  • ಸೀತಾರಾಮನ್ ಜೊತೆಗೆ ಅನುರಾಗ್ ಠಾಕೂರ್​ ಮತ್ತಿತರರು ಭಾಗಿ

09:36 February 01

ಬಜೆಟ್ ಮಂಡನೆಗೆ ಟ್ಯಾಬ್​

  • 'ಬಹೀ ಖಾತಾ' ಬದಲಿಗೆ  ಬಜೆಟ್ ಮಂಡನೆಗೆ ಟ್ಯಾಬ್​
  • ಈ ಮೊದಲು ಬಜೆಟ್​ಗೆ ಬಹೀ ಖಾತಾ ಬಳಸಲಾಗುತ್ತಿತ್ತು
  • ಮೇಡ್​ ಇನ್ ಇಂಡಿಯಾ ಟ್ಯಾಬ್​​​ನಲ್ಲಿರುವ ಬಜೆಟ್ ಪ್ರತಿ
  • ಟ್ಯಾಬ್​​ ಮೂಲಕ ಬಜೆಟ್​ ಮಂಡನೆ ಮಾಡಲಿರುವ ಸಚಿವೆ
  • ಹ್ಯಾಂಡ್​ಮೇಡ್​ ಬ್ಯಾಗ್​ನಲ್ಲಿರುವ ಮೇಡ್​ ಇನ್​ ಇಂಡಿಯಾ ಟ್ಯಾಬ್​​
  • ಕೆಂಪು ಬಣ್ಣದಲ್ಲಿರುವ ಹ್ಯಾಂಡ್​ಮೇಡ್ ಬ್ಯಾಗ್

09:28 February 01

ಹಣಕಾಸು ಸಚಿವಾಲಯದಿಂದ ಹೊರಟ ಸಚಿವೆ ನಿರ್ಮಲಾ ಸೀತಾರಾಮನ್​

ಹಣಕಾಸು ಸಚಿವಾಲಯದಿಂದ ಹೊರಟ ಸಚಿವೆ ನಿರ್ಮಲಾ ಸೀತಾರಾಮನ್​
  • 2021-22ನೇ ಕೇಂದ್ರ ಬಜೆಟ್​ ಮಂಡನೆಗೆ ಕ್ಷಣಗಣನೆ
  • ಕಾಗದರಹಿತ ಬಜೆಟ್​​ ಮಂಡನೆ ಮಾಡಲಿರುವ ಕೇಂದ್ರ ಹಣಕಾಸು ಸಚಿವೆ
  • ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  ಕಾಗದರಹಿತ ಬಜೆಟ್​​ ಮಂಡನೆ
  • ಹಣಕಾಸು ಸಚಿವಾಲಯದಿಂದ ಹೊರಟ ಸಚಿವೆ ನಿರ್ಮಲಾ ಸೀತಾರಾಮನ್​
  • ನಿರ್ಮಲಾ ಸೀತಾರಾಮನ್​ಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಾಥ್

09:21 February 01

ಬಿಎಸ್​ಇ ಸೆನ್ಸೆಕ್ಸ್​ನಲ್ಲಿ 401.77 ಅಂಕಗಳ ಏರಿಕೆ

  • ಇಂದು ಕೇಂದ್ರ ಬಜೆಟ್​ ಮಂಡನೆ ಹಿನ್ನೆಲೆ
  • ಬಿಎಸ್​ಇ ಸೆನ್ಸೆಕ್ಸ್​ನಲ್ಲಿ 401.77 ಅಂಕಗಳ ಏರಿಕೆ
  • 46,687.54ಕ್ಕೆ ತಲುಪಿದ ಬಿಎಸ್​ಇ ಸೆನ್ಸೆಕ್ಸ್​

09:03 February 01

ಬಜೆಟ್​ ಮಂಡಿಸಲು ಕ್ಷಣಗಣನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ ಮಂಡಿಸಲು ಕ್ಷಣಗಣನೆ ಆರಂಭವಾಗಿದ್ದು,  ಕೊರೊನಾ ಕಾಲದಲ್ಲಿ ಬಜೆಟ್​ ಯಾವ ರೀತಿ ಇರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಬಜೆಟ್​​ ಮಂಡನೆ ದಿನದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ..

Last Updated : Feb 1, 2021, 5:30 PM IST

ABOUT THE AUTHOR

...view details