ಕರ್ನಾಟಕ

karnataka

ETV Bharat / bharat

ಅನುರಾಗ್ ಕಶ್ಯಪ್ ವಿರುದ್ಧ #MeToo ಆರೋಪ : ಬೆಂಬಲಕ್ಕೆ ನಿಂತ ಗಣ್ಯರು - ನಟಿ ಪಯಾಲ್ ಘೋಷ್ ಮಾಡಿದ ಲೈಂಗಿಕ ಕಿರುಕುಳ ಆರೋಪ

ಚಾವ್ಲಾ ಕೂಡ ಟ್ವೀಟ್​ ಮಾಡಿದ್ದು,ನಿರ್ದೇಶಕರ ವಿರುದ್ಧದ ಆರೋಪವು ಸಮಯ ಸಾಧಕತ್ವವನ್ನು ತೋರಿಸುತ್ತದೆ ಎಂದಿದ್ದಾರೆ. ನಿಮ್ಮಂತಹ ಪುರುಷರನ್ನು ಅವರು ಗೌರವಿಸುವುದಿಲ್ಲ. ನೀವು ಯಾರೆಂದು ತಿಳಿಯಲು ಅವರಲ್ಲಿ ಜ್ಞಾನದ ಕೊರತೆ ಇದೆ. ಅವರು ಮಾಡಿರುವ ಆರೋಪ ವಿಲಕ್ಷಣವಾಗಿದೆ ಎಂದು ಕಶ್ಯಪ್​ ಗುಣಗಾನ ಮಾಡಿದ್ದಾರೆ..

celebs-support-anurag-kashyap-amid-number-metoo-allegation
ಅನುರಾಗ್ ಕಶ್ಯಪ್ ವಿರುದ್ಧ #MeToo ಆರೋಪ

By

Published : Sep 20, 2020, 4:00 PM IST

ಮುಂಬೈ: ಅನುರಾಗ್ ಕಶ್ಯಪ್​ ಮೇಲೆ ಮಾಡಿದ ಲೈಂಕಿಕ ಕಿರುಕುಳ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ-ವಿರೋಧದ ಚರ್ಚೆ ನಡೆಯುತ್ತಿವೆ. ಇದರ ಬೆನ್ನಲ್ಲೇ ಅನುರಾಗ್ ಕಶ್ಯಪ್ ಅವರ ಸ್ನೇಹಿತರಾದ ಅನುಭವ್ ಸಿನ್ಹಾ, ಟಿಸ್ಕಾ ಚೋಪ್ರಾ ಮತ್ತು ಸುರ್ವೀನ್ ಚಾವ್ಲಾ ಅವರು ಕಶ್ಯಪ್​ ಬೆಂಬಲಕ್ಕೆ ನಿಂತಿದ್ದಾರೆ.

ನಟಿ ಪಾಯಲ್ ಘೋಷ್ ಮಾಡಿದ ಲೈಂಗಿಕ ಕಿರುಕುಳ ಆರೋಪದ ನಂತರ ಹಲವಾರು ನಟ - ನಟಿಯರು ಇಬ್ಬರ ಬಗ್ಗೆ ಪರ-ವಿರೋಧದ ಟ್ವೀಟ್​ ಮಾಡುತ್ತಿದ್ದಾರೆ. ಪಾಯಲ್ ಘೋಷ್, ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿ, ಚಲನಚಿತ್ರ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಕಶ್ಯಪ್​ ಪರ ಬ್ಯಾಟಿಂಗ್ ಮಾಡಿರುವ ಸ್ನೇಹಿತ ಸಿನ್ಹಾ, #MeToo ಚಳವಳಿಯು ಕಿರುಕುಳಕ್ಕೊಳಗಾದ ಮಹಿಳೆಯರ ಧ್ವನಿ ಹೆಚ್ಚಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. #MeToo ಚಳವಳಿಯನ್ನು ಎಚ್ಚರಿಕೆಯಿಂದ ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದಿದ್ದಾರೆ.

ಚಾವ್ಲಾ ಕೂಡ ಟ್ವೀಟ್​ ಮಾಡಿದ್ದು,ನಿರ್ದೇಶಕರ ವಿರುದ್ಧದ ಆರೋಪವು ಸಮಯ ಸಾಧಕತ್ವವನ್ನು ತೋರಿಸುತ್ತದೆ ಎಂದಿದ್ದಾರೆ. ನಿಮ್ಮಂತಹ ಪುರುಷರನ್ನು ಅವರು ಗೌರವಿಸುವುದಿಲ್ಲ. ನೀವು ಯಾರೆಂದು ತಿಳಿಯಲು ಅವರಲ್ಲಿ ಜ್ಞಾನದ ಕೊರತೆ ಇದೆ. ಅವರು ಮಾಡಿರುವ ಆರೋಪ ವಿಲಕ್ಷಣವಾಗಿದೆ ಎಂದು ಕಶ್ಯಪ್​ ಗುಣಗಾನ ಮಾಡಿದ್ದಾರೆ.

"ಚುರಿ" ಕಿರುಚಿತ್ರದಲ್ಲಿ ಕಶ್ಯಪ್ ಮತ್ತು ಚಾವ್ಲಾ ಅವರೊಂದಿಗೆ ಕಾಣಿಸಿಕೊಂಡ ಚೋಪ್ರಾ ಕೂಡ ಬ್ಯಾಟಿಂಗ್ ಮಾಡಿದ್ದು, ಮಹಿಳೆ ಅಥವಾ ಪುರುಷ ಯಾರೇ ಇರಲಿ ಅವರ ಏಳ್ಗೆಗೆ ಚಿತ್ರ ನಿರ್ಮಾಪಕರ ಪಾತ್ರ ಬಹಳ ದೊಡ್ಡದು ಎಂದಿದ್ದಾರೆ. ಕಶ್ಯಪ್​ ಅವರ ಒಂದೊಂದು ಸೂಕ್ಷ್ಮ ನೋಟವೂ ಮಹಿಳೆಯರ ಬಗೆಗಿನ ಅವರ ದೃಷ್ಟಿಕೋನವನ್ನು ತಿಳಿಸುತ್ತದೆ ಎಂದಿದ್ದಾರೆ.

ನನ್ನನ್ನು ತುಳಿಯಲು ಇಷ್ಟು ಸಮಯ ತೆಗೆದುಕೊಳ್ಳಲಾಗಿದೆ. ನನ್ನನ್ನು ಹೊಸಕಿ ಹಾಕಲು ನೀವು ತುಂಬಾ ಸುಳ್ಳು ಹೇಳಿದ್ದೀರಿ. ಇತರ ಮಹಿಳೆಯರನ್ನು ಸಹ ಅದರಲ್ಲಿ ಎಳೆದಿದ್ದೀರಿ. ದಯವಿಟ್ಟು ಸ್ವಲ್ಪ ಘನತೆ ಕಾಪಾಡಿಕೊಳ್ಳಿ. ನಿಮ್ಮೆಲ್ಲ ಆರೋಪಗಳು ಆಧಾರ ರಹಿತವಾಗಿವೆ ಎಂದು ಕಶ್ಯಪ್ ಕೂಡ ಘೋಷ್ ವಿರುದ್ಧ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details