ಹೈದರಾಬಾದ್:ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಆದರೆ, ಕಳೆದ 72 ವರ್ಷಗಳಲ್ಲಿ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವಾ? ಎನ್ನುವ ಪ್ರಶ್ನೆಯೊಂದು ದುತ್ತೆಂದು ನಮ್ಮ ಮುಂದೆ ಮೂಡುತ್ತಿದೆ. ಇದು ಭಾರತದ ಭವಿಷ್ಯದ ಬಗ್ಗೆ ಸಾಕಷ್ಟು ಆತಂಕ ಮೂಡಿಸಿದೆ.
ಜಾಗತೀಕರಣ ಯುಗದಲ್ಲಿ ಗಾಂಧೀವಾದಿಯ ಆದರ್ಶಗಳ ಬಗ್ಗೆ ಮಾತನಾಡುವುದು ಇಷ್ಟ ಕಷ್ಟೇ. ಆದರೆ ಶತಕೋಟಿ ಭಾರತೀಯರಲ್ಲಿ ಅರ್ಧದಷ್ಟು ಯುವಕರು ಮಹಾತ್ಮ ಗಾಂಧಿ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಗಾಂಧಿ ಆದರ್ಶ,ಮೌಲ್ಯದ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ತಮ್ಮ ಜೀವನದಲ್ಲಿ ಅವುಗಳನ್ನ ಬಳಕೆ ಮಾಡಲು ನಿರ್ಧರಿಸಿದ್ದಾರೆ. ಇಂದಿನ ಯುವ ಸಮುದಾಯ ಸುಲಭ ಹಾದಿಯಲ್ಲಿ ತಮ್ಮ ಗುರಿ ಸಾಧಿಸುವ ಆತುರದಲ್ಲಿದ್ದಾರೆ. ಆದರೆ ಇವರಿಗೆಲ್ಲ ಐನ್ಸ್ಟೇನ್,ಬರ್ನಾಡ್ ಷಾ, ದಾರ್ಶನಿಕ ರಸ್ಸೆಲ್, ರಾಷ್ಟ್ರಪಿತ ಗಾಂಧಿ ದಾರಿದೀಪವಾಗಬೇಕು.
ಬುದ್ಧ ಮತ್ತು ಯೇಸು ಕ್ರಿಸ್ತನಂತೆಯೇ ಮಾನವೀಯತೆಯ ಮೂರ್ತಿಯಾಗಿದ್ದರು. ಅರಬ್ ಕವಿ ಮಿಖಾಯಿಲ್ ನೊಯೆಮಾ ಅವರು ಮಾತುಗಳು ಗಾಂಧಿಯವರ ಬಗ್ಗೆ ಉಲ್ಲೇಖಗೊಂಡಿವೆ. ಗಾಂಧಿಯವರ ಕೈಯಲ್ಲಿರುವ ಚರಕ ಕತ್ತಿಗಿಂತಲೂ ತೀಕ್ಷ್ಣ ಎಂದು ಅವರು ಹೇಳಿದ್ದರು. ಗಾಂಧಿಯವರ ದೇಹವನ್ನ ಸುತ್ತುವ ಬಿಳಿ ಬಟ್ಟೆ ಅವರ ರಕ್ಷಾಕವಚವಾಗಿದ್ದು, ಬಂದೂಕು ಸಹ ಅದನ್ನು ಬೇಧಿಸಲು ಅಆಧ್ಯ ಎಂದಿದ್ದರು.