ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದ ಪೂಂಚ್​​ನಲ್ಲಿ ಮತ್ತೆ ಪಾಕ್​ ದುರ್ಬುದ್ಧಿ ಪ್ರದರ್ಶನ - ಪಾಕಿಸ್ತಾನ 2,050 ಬಾರಿ ಕದನ ವಿರಾಮ ಉಲ್ಲಂಘನೆ

ಪೂಂಚ್‌ನ ದಿಗ್ವಾರ್ ವಲಯದಲ್ಲಿ ಪಾಕಿಸ್ತಾನ ಸೇನೆಯು ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.

Ceasefire violation by Pakistan in Digwar sector of Poonch
Ceasefire violation by Pakistan in Digwar sector of Poonch

By

Published : Jan 24, 2020, 7:46 PM IST

ಪೂಂಚ್​(ಜಮ್ಮು ಕಾಶ್ಮೀರ):ಪೂಂಚ್‌ನ ದಿಗ್ವಾರ್ ವಲಯದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಕಳೆದ ವರ್ಷ ಪಾಕಿಸ್ತಾನ ಸೇನೆಯು 2,050 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. ಪಾಕಿಸ್ತಾನದ ಈ ಉದ್ಧಟತನಕ್ಕೆ 21 ಯೋಧರು ಬಲಿಯಾಗಿದ್ದರು.

ಭಾರತದೊಳಗೆ ನುಸುಳುವುದು ಮತ್ತು ಅಪ್ರಚೋದಿತ ಗುಂಡಿನ ದಾಳಿ ನಿಯಂತ್ರಿಸುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿತ್ತು. ಆದರೂ ಪಾಕಿಸ್ತಾನ ತನ್ನ ಚಾಳಿ ಬಿಡುತ್ತಿಲ್ಲ. ಕಳೆದ ವರ್ಷ ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2003ರಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಉಭಯ ರಾಷ್ಟ್ರಗಳ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೂ ಪಾಕ್​ ಪದೇಪದೇ ತನ್ನ ದುರ್ಬುದ್ಧಿ ಪ್ರದರ್ಶಿಸುತ್ತಿದೆ.

ABOUT THE AUTHOR

...view details