ಕರ್ನಾಟಕ

karnataka

ETV Bharat / bharat

ಕೋವಿಡ್ ಐಸಿಯುನಲ್ಲಿ ಅಗ್ನಿ ಅವಘಡ: ಸಿಸಿಟಿವಿ ದೃಶ್ಯಾವಳಿ ಲಭ್ಯ - SSG Hospital of Vadodara

ನಿನ್ನೆ ಸಂಜೆ ವಡೋದರದ ಎಸ್​ಎಸ್​​ಜಿ ಆಸ್ಪತ್ರೆಯ ಕೋವಿಡ್ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಇಂದು ಲಭ್ಯವಾಗಿದೆ.

CCTV footage of the fire at the SSG Hospital in Vadodara yesterday has come to light.story_gjc1004
ವಡೋದರದ ಎಸ್​ಎಸ್​​ಜಿ ಆಸ್ಪತ್ರೆಯ ಕೋವಿಡ್ ಐಸಿಯುನಲ್ಲಿ ಅಗ್ನಿ ಅವಘಡ; ಸಿಸಿಟಿವಿ ದೃಶ್ಯಾವಳಿ

By

Published : Sep 10, 2020, 10:35 AM IST

ವಡೋದರ: ನಿನ್ನೆ ಸಂಜೆ ವಡೋದರದ ಎಸ್ಸೇಜ್ ಆಸ್ಪತ್ರೆಯ ಕೋವಿಡ್ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಇಂದು ಲಭ್ಯವಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ, ರೋಗಿಯ ಪಕ್ಕದ ವೆಂಟಿಲೇಟರ್​​ನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಸುತ್ತಲೂ ಬೆಂಕಿ ಹರಡಿದ್ದನ್ನು ಗಮನಿಸಬಹುದು. ಈ ಅಗ್ನಿ ಅವಘಡ ಯಾವುದೇ ಶಾರ್ಟ್​ ಸರ್ಕ್ಯೂಟ್​ನಿಂದ ಸಂಭವಿಸಿದ್ದಲ್ಲ, ಬದಲಾಗಿ ಐಸಿಯುನಲ್ಲಿದ್ದಂತಹ ವೆಂಟಿಲೇಟರ್​ನಲ್ಲಿ ಕಿಡಿ ಹೊತ್ತಿಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳು ತಿಳಿಸುತ್ತವೆ.

ಕೋವಿಡ್ ಐಸಿಯುನಲ್ಲಿ ಅಗ್ನಿ ಅವಘಡ

ಸಿಸಿಟಿವಿ ದೃಶ್ಯಾವಳಿಯಲ್ಲಿ ಗಮನಿಸಬಹುದಾದ ಮತ್ತೊಂದು ವಿಷಯವೆಂದರೆ, ಐಸಿಯುನಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿ ಕಿಡಿ ಹೊತ್ತಿದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಅಲ್ಲಿದ್ದ ಕೊರೊನಾ ರೋಗಿಯನ್ನು ಆ ಕೂಡಲೇ ಬೇರೆ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ. ಕೆಲವೇ ನಿಮಿಷಗಳಲ್ಲಿ ಅಗ್ನಿ ನಂದಿದೆ. ಇನ್ನು ಈ ಬಗ್ಗೆ ತನಿಖಾ ಸಮಿತಿಯನ್ನು ನೇಮಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

ABOUT THE AUTHOR

...view details