ಗುರ್ದಾಸ್ಪುರ(ಪಂಜಾಬ್) : ಇಲ್ಲಿನ ಬಟಾಲಾದ ಪಟಾಕಿ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಸ್ಫೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಈ ದೃಶ್ಯಗಳು ತೋರಿಸುತ್ತಿದೆ.
ಬಟಾಲಾ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣ... ಸಿಸಿಟಿವಿ ದೃಶ್ಯದಲ್ಲಿ ಸ್ಫೋಟದ ತೀವ್ರತೆ ದಾಖಲು - ಸಿಸಿಟಿವಿ ದೃಶ್ಯ
ಪಂಜಾಬ್ನ ಗುರುದಾಸ್ಪುರದ ಬಟಾಲಾ ಪಟಾಕಿ ಕಾರ್ಖಾನೆಯಲ್ಲಿ ಬುಧವಾರ ಸಂಜೆಯ ವೇಳೆ ಸಂಭವಿಸಿದ ಸ್ಫೋಟದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ. ಸ್ಫೋಟದ ತೀವ್ರತೆಯನ್ನು ಈ ದೃಶ್ಯಗಳು ತೋರಿಸುತ್ತಿದೆ. ಸ್ಫೋಟದಿಂದ ಸುಮಾರು 23 ಜನ ಸಾವನ್ನಪ್ಪಿದ್ದರು.
ಸಿಸಿಟಿವಿ ದೃಶ್ಯ
ಬುಧವಾರ ಸಂಜೆಯ ವೇಳೆಗೆ ಸಂಭವಿಸಿದ ಸ್ಫೋಟದಿಂದ ಸುಮಾರು 23 ಜನ ಸಾವನ್ನಪ್ಪಿದ್ದರು. ಪ್ರಬಲ ಸ್ಫೋಟ ಸಂಭವಿಸಿದ ಪರಿಣಾಮ ಕಾರ್ಖಾನೆಯ ವಸ್ತುಗಳು ಸುಮಾರು 1 ಕಿ.ಮೀವರೆಗೂ ಎಸೆಯಲ್ಪಟ್ಟಿತ್ತು. ಅಲ್ಲದೆ ಕಾರು, ಬೈಕ್ಗಳಿಗೂ ಹಾನಿ ಸಂಭವಿಸಿತ್ತು.
ಈ ಪಟಾಕಿ ಕಾರ್ಖಾನೆ ಹಾಗೂ ಕಾರ್ಖಾನೆಯ ಸುತ್ತಮುತ್ತಲೂ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.